ಕನ್ನಡ ಸಾಹಿತ್ಯ ಪರಿಷತ್; ಎಸ್. ರಂಗಪ್ಪ ಆಗಮನ, ಡಾ. ಮನು ಬಳಿಗಾರ್ ನಿರ್ಗಮನ..

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಆಡಳಿತಾಧಿಕಾರಿ ಆಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ನ ನಿರ್ಗಮಿತ ಅಧ್ಯಕ್ಷ ಡಾ. ಮನು ಬಳಿಗಾರ್ ಅವರು ಎಸ್. ರಂಗಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ಹೊಸ ಆಡಳಿತಾಧಿಕಾರಿಯವರ ನೇಮಕದಿಂದ ಕನ್ನಡ ಸಾಹಿತ್ಯ ಪರಿಷತ್ನ ಐದೂವರೆ ವರ್ಷದ ಕಾರ್ಯಕಾರಿಣಿ ಇಂದು ಮುಕ್ತಾಯಗೊಂಡಿದೆ. ಸದ್ಯದಲ್ಲೇ ನಡೆಯಲಿರುವ ಚುನಾವಣೆ ಪೂರ್ಣಗೊಂಡು ಹೊಸ ಕಾರ್ಯಕಾರಿಣಿ ಬರುವವರೆಗೂ ಕನ್ನಡ ಸಾಹಿತ್ಯ ಪರಿಷತ್ ಆಡಳಿತಾಧಿಕಾರಿಯವರ ಉಸ್ತುವಾರಿಯಲ್ಲಿ ಇರಲಿದೆ.