ಸಾರಾ ಮಹೇಶ್ ಮಾಡಿದ್ದ ಕಿಕ್ ಬ್ಯಾಕ್ ಆರೋಪಕ್ಕೆ ರೋಹಿಣಿ ಸಿಂಧೂರಿ ಕೊಟ್ರು ಸ್ಪಷ್ಟನೆ..!

ಸಾರಾ ಮಹೇಶ್ ಮಾಡಿದ್ದ ಕಿಕ್ ಬ್ಯಾಕ್ ಆರೋಪಕ್ಕೆ ರೋಹಿಣಿ ಸಿಂಧೂರಿ ಕೊಟ್ರು ಸ್ಪಷ್ಟನೆ..!

ಮೈಸೂರು : ಮೈಸೂರಿನ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾರಾ ಮಹೇಶ್ ಮಾಡಿದ್ದ ಕಿಕ್ ಬ್ಯಾಕ್ ಆರೋಪಕ್ಕೆ ರೋಹಿಣಿ ಸಿಂಧೂರಿ ಸ್ಪಷ್ಟೀಕರಣ ನೀಡಿದ್ದು, ನನ್ನ ಮೇಲೆ ಸತ್ಯಕ್ಕೆ ದೂರವಾದ ಆರೋಪ ಮಾಡಲಾಗಿದೆ. ಇದು ನನ್ನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತವಾದ ಪಿತೂರಿಯ ಮುಂದುವರಿದ ಭಾಗ ಎಂದು ತಿರುಗೇಟು ನೀಡಿದ್ದಾರೆ. ವಾಟ್ಸ್ ಅಪ್ ಗ್ರೂಪ್ ನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ರೋಹಿಣಿ ಸಿಂಧೂರಿ,

ನನ್ನ ಮೇಲೆ ಸತ್ಯಕ್ಕೆ ದೂರವಾದ ಆರೋಪ ಮಾಡಲಾಗಿದೆ. ಇದು ನನ್ನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತವಾದ ಪಿತೂರಿಯ ಮುಂದುವರಿದ ದಾಳಿ. ತಾವು ಮಾಡಿರುವ ಅಕ್ರಮ ಮುಚ್ಚಿಕೊಳ್ಳಲು ಮತ್ತು ಮಾಡಿರುವ ಅಕ್ರಮಗಳ ಬಗ್ಗೆ ಯಾವ ಅಧಿಕಾರಿಯೂ ತನಿಖೆಗೆ ಮುಂದಾಗಬಾರದೆಂದು ಹೆದರಿಸುವ ತಂತ್ರದ ಭಾಗ ಇದು. ಇದಕ್ಕೆ ಯಾವ ಅಧಿಕಾರಿಗಳು ಹೆದರದೆ ಇರುವ ಸತ್ಯ ಬಹಿರಂಗಪಡಿಸಬೇಕೆಂದು ಗುಡುಗಿದ್ದಾರೆ.