ರಾಜಕೀಯದಲ್ಲಿ ಕೆಟ್ಟ ಪದ ಬಳಕೆ ಮಾಡಬಾರದು
ಟೀಕೆ ಟಿಪ್ಪಣಿ ಯಾವುದೇ ಇರಲಿ, ಕೆಟ್ಟ ಶಬ್ದಗಳನ್ನು ಬಳಸಬಾರದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ರು.ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ರಾಜಕಾರಣಿಗಳನ್ನು ನೋಡುತ್ತಿರುತ್ತಾರೆ, ಅದ್ದರಿಂದ ಬಹಳ ಗೌರವದಿಂದ ನಡೆದುಕೊಳ್ಳಬೇಕು. ಇನ್ನೊಬ್ಬರಿಗೆ ಮಾಧರಿಯಾಗಿ ಇರಬೇಕು. ಈಗ ಬಳಸುತ್ತಿರುವ ಶಬ್ದಗಳು ಯಾರಿಗೂ ಸರಿ ಅನಿಸಿಲ್ಲ.ಯಾರದೇ ವೈಯಕ್ತಿಕ ವಿಚಾರಗಳಿಗೆ ಹೋಗಬಾರದು ಇದು ಒಳ್ಳೆಯದಲ್ಲ. ಮೌಲ್ಯಾಧಾರಿತ ರಾಜಕಾರಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ . ಇವತ್ತಿನ ರಾಜಕಾರಣದ ಬಗ್ಗೆ ಜನ ಬೈಯುತ್ತಿದ್ದಾರೆ. ಹೀಗಾಗಿ ರಾಜಕಾರಣಿಗಳು ಸರಿಪಡಿಸಿಕೊಳ್ಳಬೇಕು ಎಂದರು. ಇಂಧನ ಬೆಲೆ ಏರಿಕೆಗೆ ಕರೊನಾ ಕಾರಣವೆಂದು ಸಚಿವ ಕತ್ತಿ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಸಚಿವರು ಹೇಳುವ ಮಾತು ಸರ್ಕಾರದ ಮಾತು ಇದ್ದಂತೆ. ಯಾವುದೇ ಮಂತ್ರಿಯಾಗಿರಲಿ ಜವಾಬ್ದಾರಿಯಿಂದ ಮಾತನಾಡಬೇಕು. ಮಂತ್ರಿ ಮಾತನಾಡುವುದಕ್ಕೂ ಜನ ಮಾತನಾಡುವುಕ್ಕೂ ವ್ಯತ್ಯಾಸ ಇದೆ ಎಂದು ಹೊರಟ್ಟಿ ಬುದ್ದಿ ಮಾತ್ತು ಹೇಳಿದ್ರು.