ರಾಜ್ಯಸಭಾ ಕಲಾಪ ನಡೆಸಿಕೊಟ್ಟ ಪಿ.ಟಿ.ಉಷಾ

ರಾಜ್ಯಸಭಾ ಕಲಾಪ ನಡೆಸಿಕೊಟ್ಟ ಪಿ.ಟಿ.ಉಷಾ

ವದೆಹಲಿ: ಮಾಜಿ ಓಟದ ದಂತಕಥೆ, ಪಯ್ಯೋಳಿ ಎಕ್ಸ್‌ಪ್ರೆಸ್‌ ಪಿ.ಟಿ.ಉಷಾ ಇನ್ನೊಂದು ಎತ್ತರಕ್ಕೆ ಏರಿದ್ದಾರೆ. ಕಳೆದ ವರ್ಷ ರಾಜ್ಯಸಭೆ ನಾಮನಿರ್ದೇಶಿತ ಸದಸ್ಯೆಯಾಗಿ ಆಯ್ಕೆಯಾಗಿದ್ದ ಅವರು ಗುರುವಾರ ಕಲಾಪ ನಿರ್ವಹಿಸುವ ಹೊಣೆ ನಿರ್ವಹಿಸಿದ್ದಾರೆ

ಸಭಾಪತಿ ಹಾಗೂ ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌, ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್‌ ಅನುಪಸ್ಥಿತಿಯಲ್ಲಿ ಕಲಾಪಗಳನ್ನು ನಡೆಸಿಕೊಡುವ ಹೊಣೆ ಉಷಾ ಅವರದ್ದಾಗಿತ್ತು. ಇದೇ ಮೊದಲ ಬಾರಿಗೆ ಅವರು ಜವಾಬ್ದಾರಿ ಹೊತ್ತುಕೊಂಡಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ ಅವರು, ದೊಡ್ಡ ಅಧಿಕಾರವಿದ್ದಾಗ, ದೊಡ್ಡ ಜವಾಬ್ದಾರಿಯೂ ಇರುತ್ತದೆ ಎಂದು ಫ್ರಾಂಕ್ಲಿನ್‌ ರೂಸ್‌ವೆಲ್ಟ್ ಹೇಳಿದ್ದರು. ರಾಜ್ಯಸಭಾ ಕಲಾಪ ನಡೆಸುವ ಪೀಠಕ್ಕೆ ಏರಿದಾಗ ನನಗೆ ಇದು ಅರಿವಾಯಿತು. ಇಲ್ಲೂ ಮೈಲುಗಲ್ಲುಗಳನ್ನು ನಿರ್ಮಿಸುವ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ.