ಹಾನಗಲ್ ಬಿಜೆಪಿ ಗೆಲವು ಖಚಿತ ಬಿಎಸ್ ವೈ

ಹಾನಗಲ್ ಬೈ ಇಲೆಕ್ಷನ್ ಎರಡು ಪ್ರತಿಷ್ಠಿತ ಪಕ್ಷಗಳ ನಡುವೆ ಹೋರಾಟ ನಡೆದಿದ್ದು. ಎರಡು ಪಕ್ಷದ ನಾಯಕರು ಮತದಾರರನ್ನು ಸೆಳೆಯಲು ಎಲ್ಲಾ ಪ್ರಯತ್ನ ನಡೆಸಿದ್ದಾರೆ. ಆದ್ರೆ ಮತದಾರ ಪ್ರಭುಗಳು ಯಾರ ಕೈ ಹಿಡಿಯಲಿದ್ದಾರೆ ಎಂಬುವುದು ಕಾದೂ ನೋಡಬೇಕಿದೆ. ಇಂದು ಹಾನಗಲ್ ನಗರ ಹಾಗೂ ತಾಲ್ಲೂಕಿನಾದ್ಯಂತ ಭರ್ಜರಿ ಪ್ರಚಾರ ಮಾಡಿದ ಮಾಜಿ ಸಿಎಂ ಬಿಎಸ್ ವೈ, ಸಚಿವ ಸೋಮಶೇಖರ, ಸಂಕಣ್ಣವರ ಸೇರಿದಂತೆ ನಾಗನಗೌಡ ನೀರಲಗಿ ಪಾಟೀಲ್ ಭಾಗಿಯಾಗಿ ಹೆರೂರ ಗ್ರಾಮದಲ್ಲಿ ಬಹಿರಂಗ ಸಭೆಯಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಸಿದ್ರು. ಮಾಜಿ ಸಿಎಂ ಯಡಿಯೂರಪ್ಪನವರು ವೇದಿಕೆಗೆ ಬರುತ್ತಿದಂತೆ ಕೋಡಿದ ಜನ ರಾಜಾಹುಲಿಗೆ ಜೈಯವಾಗಲಿ ಎಂದು ಜೈಕಾರ ಹಾಕಿ ಕೇಕೆ ಸಿಳಿ ಹಾಕುವ ಮೂಲಕ ಹೂವಿನ ಸುರಮಳೆಗೈದರು. ಒಟ್ಟಿನಲ್ಲಿ ಬಿಎಸ್ ವೈ ಅವರಿಗೆ ಹಾನಗಲ್ ಜನತೆ ಅದ್ದೂರಿ ಸ್ವಾಗತ ಕೋರಿದ್ದಾರೆ....