ಕೇವಲ ಮೂರೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದ ಸಾಲ 2,54,760: ಸಾಲದ ಹಣ ಹೋಗಿದ್ದೆಲ್ಲಿಗೆ.?- ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: ಹಿಂದಿನ ಎಲ್ಲಾ ಸರ್ಕಾರಗಳ ಅವಧಿಯ ಸಾಲವನ್ನೂ ಸೇರಿಸಿ ಬಿಜೆಪಿ ಅಧಿಕಾರಕ್ಕೆ ಬರುವವರೆಗೆ ರಾಜ್ಯದ ಮೇಲಿದ್ದ ಒಟ್ಟು ಸಾಲ 2,42,000 ಕೋಟಿ. ಕೇವಲ ಮೂರೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದ ಸಾಲ 2,54,760 ಇಷ್ಟು ದೊಡ್ಡ ಮೊತ್ತದ ಸಾಲ ಮಾಡಿಯೂ ಸಹ ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲ.
ಇಂದು ಟ್ವಿಟ್ ಮಾಡಿದ್ದು, ಕಮಿಷನ್ನಿಗಾಗಿ ಇಂತಿಷ್ಟು ಕೋಟಿ ಎಂದು ಪ್ರತ್ಯೇಕವಾಗಿ 'ಕಮಿಷನ್ ಬಾಬ್ತು' ಘೋಷಿಸಿದ್ದರೆ ಒಳ್ಳೆಯದಿತ್ತು! ಯೋಜನೆಗಳ ಅನುಷ್ಠಾನದಲ್ಲಿ ಕಮಿಷನ್ ಕಡಿತ ಮಾಡುವುದಕ್ಕಿಂತ ಬಜೆಟ್‌ನಲ್ಲಿಯೇ 40% ಮೀಸಲಿಟ್ಟಿದ್ದರೆ ಗುತ್ತಿಗೆದಾರರಿಗೆ ಕಿರಿಕಿರಿ ತಪ್ಪಿ ಕಾಮಗಾರಿಗಳು ಸುಗಮವಾಗುತ್ತಿದ್ದವು! ಬಸವರಾಜ ಬೊಮ್ಮಾಯಿ ಅವರು ಏಕೆ ಈ ಬಗ್ಗೆ ಚಿಂತಿಸಲಿಲ್ಲ? ಎಂದು ಕೇಳಿದೆ.ನಮ್ಮಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಹೇಳಲ್ಲ' - ಸಿಟಿ ರವಿ. ಬಿಜೆಪಿಯ ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಬಿಜೆಪಿ ಭ್ರಷ್ಟತನವನ್ನು ಒಪ್ಪಿಕೊಂಡ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು! ಬಿಜೆಪಿಗರ ಮೈಯ್ಯಲ್ಲಿ ಹರಿಯುತ್ತಿರುವುದೇ ಭ್ರಷ್ಟಾಚಾರದ ರಕ್ತ, ಹೀಗಿರುವಾಗ ನಾವು ಸಭ್ಯರು ಎಂದು ಹೇಳಿಕೊಳ್ಳಲು ಸಾಧ್ಯವೇ ಎಂದಿದೆ