ಬಿ ಅಲರ್ಟ್...ಕ್ರೈಂ ಮಾಡಲು ನವೆಂಬರ್ 11ಕ್ಕೆ ಬರ್ತಿದ್ದಾರೆ 'ಯಲ್ಲೋ ಗ್ಯಾಂಗ್"..!

ಬೆಂಗಳೂರು : ಕ್ರೈಂ ಸ್ಟೋರಿಗಳನ್ನ ಇಷ್ಟಪಡೋ ಸಿನಿಪ್ರಿಯರು ಬೇಜಾನ್ ಇದ್ದಾರೆ. 'ಯಲ್ಲೋ ಗ್ಯಾಂಗ್' ಅನ್ನೋ ಸಿನಿಮಾ ನವೆಂಬರ್ 11ಕ್ಕೆ ರಿಲೀಸ್ ಆಗ್ತಿರೋ ಮ್ಯಾಟರ್ ಈ ಕ್ಯಾಟಗೇರಿ ಮಂದಿಗೆ ಗೊತ್ತಾಗಿ ಥ್ರಿಲ್ ಆಗಿದ್ದಾರೆ. ಕ್ರೈಮ್ ಜಗತ್ತಿನ ಕಥೆಯನ್ನು ಹೇಳಹೊರಟಿರುವ "ಯೆಲ್ಲೋ ಗ್ಯಾಂಗ್' ಚಿತ್ರ ನ.11ರಂದು ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಸಿದ್ಧವಾಗಿದೆ.
"ವಿಭಿನ್ನ ಸ್ಟುಡಿಯೋಸ್'ಬ್ಯಾನರ್‌ನಲ್ಲಿ ಮನೋಜ್ ಕುಮಾರ್ ನಿರ್ಮಿಸುತ್ತಿರುವಚಿತ್ರಕ್ಕೆ ರವೀಂದ್ರ ಪರಮೇಶ್ವರಪ್ಪ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.ಯಲ್ಲೋ ಗ್ಯಾಂಗ್ಸ್' ಒಂದು ಕ್ರೈಂ ಥ್ರಿಲ್ಲರ್ ಜಾನರ್‌ನ ಚಿತ್ರ. ಚಿತ್ರತಂಡ ಕೇವಲ 35 ದಿನಗಳಲ್ಲಿ ಶೂಟಿಂಗ್ ಮುಗಿಸಿದ್ದು, ಅದ್ಭುತ ಕಥೆಯ ಮೂಲಕ ನಿಮ್ಮನ್ನ ರಂಜಿಸಲು ಬರುತ್ತಿದೆ. ಡರ್ಟಿ ಮನಿ ಎನ್ನುವುದು ಚಿತ್ರದ ಮುಖ್ಯ ಕಥೆಯಾಗಿ ಸಾಗುತ್ತದೆ. ಗುರುತು ಪರಿಚಯವಿಲ್ಲದವರು ಕಾರಣಾಂತರಗಳಿಂದ ಮುಖಾಮುಖಿಯಾಗುವ ಸನ್ನಿವೇಶ ಎದುರಾಗುತ್ತದೆ. ಅಂತಹ ಅಂಶವನ್ನುಸಿನಿಮಾದಲ್ಲಿ ಹೇಳಲು ಹೊರಟಿದೆ ಯಲ್ಲೋ ಗ್ಯಾಂಗ್.ಅಂದ್ಮೇಲೆ ಅಲ್ಲಿ ಹಾಡುಗಳು ಇರುತ್ತೆ. ಬಟ್ ಇಲ್ಲಿ ಯಾವ ಹಾಡುಗಳು ಇರೋದಿಲ್ಲ. ಗಾಂಧಿನಗರದಲ್ಲಿ ಕೇಳಿ ಬರುತ್ತಿರೋ ಟಾಕ್ ಪ್ರಕಾರ ಚಿತ್ರ ಉತ್ತಮವಾಗಿ ಮೂಡಿಬಂದಿದೆಯಂತೆ . ಸೋ ಒಳ್ಳೆ ಸಿನಿಮಾಗಳನ್ನಾಗಿ ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ನೋಡಿ ಸಹಕರಿಸಿದ್ರೆ ಉತ್ತಮ ಅಲ್ಲವೇ.?ಇನ್ನು ಈ ಚಿತ್ರದಲ್ಲಿ ಕಲಾವಿದರುಗಳಾದ, ದೇವ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಪಿ ಜಿ, ಅರುಣ್, ನಾಟ್ಯರಂಗ, ಹರ್ಷ ನಿಮ್ಮನ್ನ ರಂಜಿಸಲು ರೆಡಿಯಾಗಿ ನಿಂತಿದ್ದಾರೆ.