ಸ್ವತಃ ರಾಹುಲ್ ಗಾಂಧಿ ವಾರಣಾಸಿ ಪ್ರವಾಸ ರದ್ದುಗೊಳಿಸಿದ್ದಾರೆ: ವರದಿ

ಸ್ವತಃ ರಾಹುಲ್ ಗಾಂಧಿ ವಾರಣಾಸಿ ಪ್ರವಾಸ ರದ್ದುಗೊಳಿಸಿದ್ದಾರೆ: ವರದಿ

ಹೊಸದಿಲ್ಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi )ಸ್ವತಃ ಉತ್ತರ ಪ್ರದೇಶದ ವಾರಣಾಸಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.ಅವರ ಚಾರ್ಟರ್ಡ್ ಏರ್‌ಲೈನ್ ಕಳೆದ ರಾತ್ರಿ ವಾರಣಾಸಿ ವಿಮಾನ ನಿಲ್ದಾಣಕ್ಕೆ ಪತ್ರ ಬರೆದು ತಮ್ಮ ಪ್ರವಾಸ ರದ್ದತಿ ಬಗ್ಗೆ ತಿಳಿಸಿತ್ತು ಎಂದು ಸರಕಾರದ ಉನ್ನತ ಮೂಲಗಳು ಮಂಗಳವಾರ ತಿಳಿಸಿವೆ.

ಸೋಮವಾರ ತಡರಾತ್ರಿ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರ ವಿಮಾನವನ್ನು ಇಳಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ವಾರಣಾಸಿ ವಿಮಾನ ನಿಲ್ದಾಣವೂ ಈ ಆರೋಪವನ್ನು ನಿರಾಕರಿಸಿದೆ.

"13ನೇ ಫೆಬ್ರವರಿ 2013 ರಂದು 21:16 ಗಂಟೆಗೆ AAI ವಾರಣಾಸಿ ವಿಮಾನ ನಿಲ್ದಾಣಕ್ಕೆ M/s AR ಏರ್‌ವೇಸ್ ಇಮೇಲ್ ಕಳುಹಿಸುವ ಮೂಲಕ ವಿಮಾನವನ್ನು ರದ್ದುಪಡಿಸಿಸಿದೆ. ದಯವಿಟ್ಟು ನಿಮ್ಮ ಹೇಳಿಕೆಯನ್ನು ಸರಿಪಡಿಸಿ" ಎಂದು ವಿಮಾನ ನಿಲ್ದಾಣದ ಅಧಿಕೃತ ಖಾತೆಯಲ್ಲಿ ಪ್ರತಿಕ್ರಿಯೆ ನೀಡಲಾಗಿದೆ.