ಏಕನಾಥ ಶಿಂಧೆ ಬಣಕ್ಕೆ ಚಿಹ್ನೆ ಬೇಡ: ಉದ್ಧವ್‌ ಠಾಕ್ರೆ

ಏಕನಾಥ ಶಿಂಧೆ ಬಣಕ್ಕೆ ಚಿಹ್ನೆ ಬೇಡ: ಉದ್ಧವ್‌ ಠಾಕ್ರೆ

ಮುಂಬೈ: ಸದ್ಯ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಗಿರುವ ಏಕನಾಥ ಶಿಂಧೆ ನೇತೃತ್ವದ ಬಣ ಸ್ವಯಂಪ್ರೇರಿತವಾಗಿಯೇ ಪಕ್ಷವನ್ನು ತೊರೆದಿದೆ.

ಹೀಗಾಗಿ, ಆ ಗುಂಪಿಗೆ ಬಿಲ್ಲು ಮತ್ತು ಬಾಣ ಚಿಹ್ನೆಯನ್ನು ನೀಡಬಾರದು ಎಂದು ಶಿವಸೇನೆಯ ಉದ್ಧವ್‌ ಠಾಕ್ರೆ ಬಣ ಚುನಾವಣಾ ಆಯೋಗದ ಮುಂದೆ ವಾದ ಮಂಡಿಸಿದೆ.

ಚಿಹ್ನೆ ಯಾರಿಗೆ ಸೇರಬೇಕು ಎಂಬ ಬಗ್ಗೆ ಶನಿವಾರದ ಒಳಗಾಗಿ ಉತ್ತರ ನೀಡಬೇಕು ಎಂಬ ಆಯೋಗದ ಸೂಚನೆ ಸಮಗ್ರ ವಿವರಣೆ ನೀಡಿದ ಉದ್ಧವ್‌ ಠಾಕ್ರೆ ಬಣ, ಏಕನಾಥ ಶಿಂಧೆ ನೇತೃತ್ವದ ಬಣದ ಅಭಿಮತವನ್ನು ಪರಿಗಣಿಸಬಾರದು. ಅವರನ್ನು ಅನರ್ಹತೆಗೊಳಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಇತ್ಯರ್ಥವಾಗಿಲ್ಲ ಎಂದು ಹೇಳಿದೆ.

ನ.3ರಂದು ಅಂಧೇರಿ ಕ್ಷೇತ್ರಕ್ಕೆ ಉಪ-ಚುನಾವಣೆ ನಡೆಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.