ರೈತರ ಬಾಳು ಕಣ್ಣಿರೀನ ಗೋಳು

ಗಬ್ಬೂರು.ಅ.೧೨- ಜೋಡೆತ್ತು ಕಟ್ಟಿ ಬಿತ್ತಿ ಬೆಳೆದ ಈ ರೈತರು ಮಳೆಗೆ ಇಂದು ನಿನ್ನೆದುರಿನಲ್ಲಿಯೇ ಮಣ್ಣು ಪಾಲಾಗುತ್ತಿದ್ದಾರೆ ಕಣ್ತೆರೆದು ನೋಡು ರೈತರ ಬಾಳು ಬರೀ ಕಣ್ಣೀರಿನ ಗೋಳಾಗಿದೆ ಎಂದು ಶಿವನನ್ನು ಪ್ರಾರ್ಥಿಸುತ್ತಿದ್ದಾರೆ.
ಬ್ರಹ್ಮ ಸೃಷ್ಟಿಸಿದ ಈ ಬ್ರಹ್ಮಾಂಡವನ್ನು ಬ್ರಹ್ಮ ನಾಲ್ಕು ವೇದಗಳಿಂದ ನಡೆಸುತ್ತಿದ್ದಾನೆ.ಆ ನಾಲ್ಕು ವೇದಗಳನ್ನು ಸೋಮರಕ್ಕಸನೆಂಬ ರಾಕ್ಷಸ ಅವುಗಳನ್ನು ಕಿತ್ತುಕೊಂಡು ಜಗತ್ತನ್ನೇ ಕತ್ತಲು ಮಾಡಿ ರೈತರು ಬೆಳೆದ ಬೆಳೆಗಳು ಹತ್ತಿ, ಮೆಣಸಿನಕಾಯಿ, ಸೂರ್ಯಕಾಂತಿ, ಭತ್ತ, ಜೋಳ, ಸಜ್ಜೆ, ವಿಪರೀತ ಮಳೆಗೆ ನೀರಿನಲ್ಲಿ ಮುಳುಗಿವೆ.
ಅಧಿಕ ಮಳೆಗೆ, ಪ್ರವಾಹದಿಂದ ಕಂಗೆಟ್ಟಿದ್ದ ರೈತ ಸಮೂಹಕ್ಕೆ ವಾಯುಭಾರ ಕುಸಿತದಿಂದಾಗಿ ವಿಪರೀತ ಮಳೆಯಿಂದ ಬರೆ ಎಳೆದಂತೆ ಆಗಿದೆ.ಜಿಲ್ಲೆಯಲ್ಲಿ ಕೃಷ್ಣ, ತುಂಗಭದ್ರ ನದಿ ಪ್ರವಾಹದಿಂದ ರೈತರು ಇನ್ನೂ ಚೇತರಿಸಿಕೊಂಡಿಲ್ಲ,ಅದರ ಮಧ್ಯದಲ್ಲಿಯೇ ವಾಯುಭಾರ ಕುಸಿತದಿಂದ ಹತ್ತಿ,ಮೆಣಸಿನಕಾಯಿ, ಭತ್ತದ ಬೆಳೆಗೆ ಕಂಟಕ ಎದುರಾಗಿದೆ.
ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಹತ್ತಿ, ಮೆಣಸಿನಕಾಯಿ, ಭತ್ತ ಬೆಳೆದಿದ್ದರು.ಮುಂಗಾರು ಆರಂಭದಿಂದಲೂ ರೈತರಿಗೆ ಒಂದಾದ ನಂತರ ಒಂದು ಪೆಟ್ಟು ಬೀಳುತ್ತಲೇ ಇದೆ.ಅಧಿಕ ಮಳೆಯಿಂದ ರೈತರನ್ನು ಜರ್ಝರಿತಗೊಳ್ಳುವಂತೆ ಮಾಡಿದೆ.