ಲಂಚಕ್ಕೆ ಬೇಡಿಕೆ ಇಟ್ಟರೇ ಲೋಕಾಯುಕ್ತಕ್ಕೆ ದೂರು ನೀಡಿ : ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಜನತೆಗೆ ಮನವಿ

ಬೆಂಗಳೂರು: ಲಂಚಕ್ಕೆ ಬೇಡಿಕೆ ಇಟ್ಟರೇ ಲೋಕಾಯುಕ್ತಕ್ಕೆ ದೂರು ನೀಡಿ ಅಂತ ಜನತೆಯಲ್ಲಿ ಅವರು ಮನವಿ ಮಾಡಿದ್ದಾರೆ. ಅವರು ಇಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ ಡಿಎಲ್) ಟೆಂಡರ್ ಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ನಿನ್ನೆ, ಪ್ರಶಾಂತ್ ಅವರನ್ನು ₹40 ಲಕ್ಷ ಲಂಚ ಪಡೆಯುತ್ತಿದ್ದಾಗ ಗುರುವಾರ ಸಂಜೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು ಇದಕ್ಕೆ ಸಂಬಂಧಪಟ್ಟಂಥೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತ ಈ ಬಗ್ಗೆ ತಿಳಿಸಿದರು.
ಇದೇ ವೇಳೆ ಅವರು ಪ್ರಕರಣ ಸಂಬಂಧ ಎಲ್ಲವೂ ಕೂಡ ನ್ಯಾಯಸಮ್ಮತವಾಗಿ ನಡೆಸಲಾಗುವುದು ಅಂಥ ತಿಳಿಸಿದರು. ಸದ್ಯ ಪ್ರಕರಣ ಸಂಬಂಧ ಐವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಅಂತ ತಿಳಿಸಿದ ಅವರು ಯಾರಿಗೂ ಭಯ ಬೀಳದೇ ಲಂಚವನ್ನು ಕೇಳಿದವರ ಬಗ್ಗೆ ಮಾಹಿತಿ ನೀಡಿ, ಯಾವುದೇ ಕಾರಣಕ್ಕೂ ಲಂಚ ಪಡೆಯುವುದು ಮತ್ತು ನೀಡುವುದು ಅಪರಾಧವಾಗಿದೆ ಅಂತ ಅವರು ಎಚ್ಚರಿಸಿದರು. ಇನ್ನೂ ನಾವು ದಾಳಿಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಅಂಥ ತಿಳಿಸಿದರು.
ಲೋಕಾಯುಕ್ತ ಸಂಸ್ಥೆ ಇರುವುದೇ ಜನರಿಗಾಗಿ ನಮ್ಮ ಸೇವೆಯನ್ನು ಜನತೆ ಉಪಯೋಗಿಸಿಕೊಳ್ಳಬೇಕು ಅಂತ ತಿಳಿಸಿದರು. ಇನ್ನೂ ಆರೋಪಿ ಪ್ರಶಾಂತ್ ಖಾಸಗಿ ಕಚೇರಿಯಲ್ಲಿ ಎರಡು ಕೋಟಿ ಲಕ್ಷ ಹಾಗೂ ಮನೆಯಲ್ಲಿ ಆರು ಕೋಟಿ ಹತ್ತು ಲಕ್ಷ ಸಿಕ್ಕಿದೆ ಅಂತ ಹೇಳಿದರು. ಇನ್ನೂ ದೂರುದಾರರ ವಿರುದ್ದ ಕೂಡ ನಾವು ತನಿಖೆ ನಡೆಸಲಾಗುತ್ತಿದೆ ಅಂತ ತಿಳಿಸಿದರು.
ಇನ್ನೂ ಜನರಲ್ಲಿ ಲಂಚ ನೀಡುವುದು ಕೂಡ ತಪ್ಪು, ಅದಕ್ಕೆ ಬಲಿಯಾಗುವುದು ಬೇಡ, ಲೀಗಲ್ ಕೆಲಸ ಮಾಡುವುದಕ್ಕೆ ದುಡ್ಡು ಯಾಕೆ ಕೊಡಬೇಕು ಅಂಥ ಪ್ರಶ್ನೆ ಮಾಡಿದ ಅವರು, ಎಲ್ಲಾ ಜಿಲ್ಲೆಯಲ್ಲಿ ಕೂಡ ನಮ್ಮ ಸಿಬ್ಬಂಧಿ ವರ್ಗದವರು ಇದ್ದಾರೆ, ಒಂದು ವೇಳೆ ಅವರು ಸರಿಯಾದ ಕ್ರಮ ಕೈಗೊಳ್ಳದೇ ಹೋದ್ರೆ ಅವರನ್ನು ಇಲಾಖೆ ತನಿಖೆಯನ್ನು ನಡೆಸಲಾಗುವುದು ಅಂತ ತಿಳಿಸಿದರು.ಇನ್ನೂ ಅನುಮಾವಿದ್ದರೇ ಶಾಸಕರನ್ನು ಕೂಡ ವಿಚಾರಣೆ ನಡೆಸಲಾಗುವುದು ಅಂಥ ತಿಳಿಸಿದ ಅವರು, ಕಾನೂನಿನ ಮುಂದೆ ಎಲ್ಲರೂ ಒಂದೇ ಎಲ್ಲರೂ ಕಾನೂನಿ ರೀತಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ ಅಂತ ತಿಳಿಸಿದರೆ. ಸದ್ಯ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿದ ಬಳಿಕ ಮಾಹಿತಿಯನ್ನು ನೀಡಲಾಗುವುದು ಅಂಥ ತಿಳಿಸಿದರು. ಇನ್ನೂ ಇನ್ನೂ ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಈ ಹಂತದಲ್ಲಿ ಮಧ್ಯೆ ಪ್ರವೇಶ ಮಾಡುವುದು ಸರಿ ಅಲ್ಲ ಅಂಥ ತಿಳಿಸಿದರು. ಪ್ರಕರಣ ತನಿಖಾಧಿಕಾರಿಗಳಿಗೆ ಎಲ್ಲಾ ರೀತಿಯಲ್ಲಿ ಫ್ರಿಡಂ ನೀಡಲಾಗಿದೆ ಅಂತ ತಿಳಿಸಿದರು.