ಪ್ಯಾಶನ್ ಶೋ ಬೆಕ್ಕಿನ ನಡೆಗೆ ನೋಡಗರ ಗಮನ ರೋಮಾಂಚಕಾರಿ ಆಯಿತು
ಕೊರೊನಾ ಲಾಕ್ ಡೌನ್ ನಂತರ ಮಕ್ಕಳು ಇಗಲೂ ಶಾಲೆಗೆ ಹೊರಟಿಲ್ಲ. ಸ್ವಲ್ಪ ದಿನಗಳಿಂದ ಕೆಲ ಮಕ್ಕಳಿಗೆ ಶಾಲೆಗೆ ಹೋಗಲು ಅವಕಾಶ ಸಿಕ್ಕಿದೆ. ಆದ್ರೆ ಅಲ್ಲಿ ಕೂಡಾ ಸಾಮಾಜಿಕ ಅಂತರ ಇರಬೇಕು. ಆದ್ರೆ ಯಾವುದೇ ಮನರಂಜನೆ ಇಲ್ಲದೇ ಬೊರ್ ಆಗಿದ್ದರು. ಆದ್ರೆ ಧಾರವಾಡದ ನವ ಕರ್ನಾಟಕ ಚಲನಚಿತ್ರ ಅಕ್ಯಾಡೆಮಿ ಒಂದು ಫ್ಯಾಷನ್ ಶೋ ಹಮ್ಮಿಕೊಂಡು ಇವರನ್ನೆಲ್ಲ ಮನರಂಜಿಸಿದೆ. ಹೇಗಿತ್ತು ಈ ಕಾರ್ಯಕ್ರಮ ನೋಡಿ. ಕೊರೊನಾದಿಂದ ಬೆಸತ್ತ ಮಕ್ಕಳು ಮನರಂಜನೆ ಇಲ್ಲದೇ ಮನೆಗಳಲ್ಲಿ ಕುಳಿತು ಬೋರ್ ಆಗಿದ್ದರು. ಎಲ್ಲಿಯೂ ಇವರಿಗೆ ತಮ್ಮ ಪ್ರತಿಭೆ ತೋರಿಸಲು ಅವಕಾಶ ಇರಲಿಲ್ಲ. ಅಲ್ಲದೇ ಕೆಲ ಮಕ್ಕಳಿಗೆ ಇಗಲೂ ಶಾಲೆಗೆ ಹೋಗೊಕೆ ಅವಕಾಶ ಕೂಡ ಇಲ್ಲ. ಆದ್ರೆ ಧಾರವಾಡದ ನವ ಕರ್ನಾಟಕ ಚಲನಚಿತ್ರ ಅಕ್ಯಾಡೆಮಿ ಈ ಎಲ್ಲವನ್ನ ಮರೆತು ಮಜರಂಜಿಸಲು ಫ್ಯಾಶನ್ ಶೋ ಹಮ್ಮಿಕೊಂಡಿತ್ತು. ಇದರಲ್ಲಿ 6 ರಿಂದ 16 ವರ್ಷದ ಮಕ್ಕಳಿಗೆ ಭಾಗವಹಿಸಲು ಅವಕಾಶ ಮಾಡಿ ಕೊಟ್ಟಿತ್ತು. ಅದೇ ರೀತಿ ಸಾಕಷ್ಟು ಮಕ್ಕಳು ಈ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಿ ತಮ್ಮ ಪ್ರತಿಭೆಯನ್ನ ತೊರಿಸಿದರು. ಪ್ರಿನ್ಸ್ & ಪ್ರಿನ್ಸ್ ಸ್ ಎಂಬ ಈ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಪೋಷಕರು ಕೂಡಾ ಮನರಂಜನೆ ಪಡೆದರು. ಮತ್ತೊಂದು ಕಡೆ ಫ್ಯಾಶನ್ ಶೋದಲ್ಲಿ ಭಾಗವಹಿಸಿದ್ದ ಮಕ್ಕಳು ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ರಂಜಿಸಿದರು. ಅಲ್ಲದೇ ಹುಡುಗರು ಕೂಡಾ ನಾವೇನೂ ಕಮ್ಮಿ ಇಲ್ಲ ಎಂಬಂತೆ ರ್ಯಾಂಪ್ ಮೇಲೆ ನಡೆದು ತೊರಿಸಿದರು. ಇನ್ನು ಕೊರೊನಾ ನಂತರ ನಮಗೆ ಈ ರೀತಿಯ ಒಂದು ವೇದಿಕೆ ಸಿಕ್ಕಿದ್ದು ಸಂತೋಷ ತಂದಿದೆ. ನಾವು ಎಲ್ಲವನ್ನ ಮರೆತು ಇವತ್ತು ಶೋದಲ್ಲಿ ಸಂಭ್ರಮ ಪಟ್ಟಿದ್ದೆವೆ ಎಂದು ಬಾಲಕಿಯೊಬ್ಬಳು ಹೇಳ್ತಾಳೆ. ಒಟ್ಟಿನಲ್ಲಿ ರ್ಯಾಂಪ್ ಮೇಲೆ ಮ್ಯುಸಿಕಿಗೆ ತಕ್ಕಂತೆ ಬೆಕ್ಕಿನ ನಡಿಗೆ ನೋಡಿ ಎಲ್ಲರೂ ಕಿರುಚಾಡಿದ್ದಷ್ಟೇ ಅಲ್ಲದೇ, ನಮಗೂ ಏಕೆ ಈ ಅವಕಾಶ ಸಿಗಲಿಲ್ಲ ಎಂದು ಕೊಂಡವರು ಬಹಳಷ್ಟು ಜನ ಇದ್ದರು. ಏನೇ ಇರಲಿ, ಇವತ್ತು ನಡೆದ ಈ ಕಾರ್ಯಕ್ರಮ ಮಕ್ಕಳಿಗೆ ಮಾತ್ರ ಸಕತ್ ಮಜಾ ಕೊಟ್ಟಿತ್ತು.