೨೦೦೦ ವಿದ್ಯಾರ್ಥಿಗಳಿಗೆ ಮಾಸ್ಕ್-ಐಸ್ ಕ್ರೀಂ ವಿತರಣೆ | Bangalore
ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಗಿಫ್ಟಿಕಾನ್ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬೆಂಗಳೂರು ಗ್ರಾಮಾಂತರ ಪ್ರದೇಶದ ಆವಲಹಳ್ಳಿಯ ಈಸ್ಟ್ ಪಾಯಿಂಟ್ ಇಂಜಿನಿಯರಿAಗ್ ಮತ್ತು ಮೆಡಿಕಲ್ ಕಾಲೇಜಿನ ಸುಮಾರು ೨೦೦೦ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯ ಲಾಂಛನವಿರುವ ಓ೯೫ ಮಾಸ್ಕ್ ಹಾಗೂ ಬಂಕಿಟ್ ರೋಬಿನ್ ಐಸ್ ಕ್ರೀಂಗಳನ್ನು ವಿತರಣೆ ಮಾಡುವ ಮೂಲಕ ವಿನೂತನವಾಗಿ ೭೫ನೆಯ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಿಫ್ಟಿಕಾನ್ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಇಒ ನಕ್ಯುಂಗ್ ಚಾಂಗ್ ಮಾತನಾಡಿ, ಮಾರಕ ಕೊರೋನ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ಮೆಡಿಕಲ್ ವಿದ್ಯಾರ್ಥಿಗಳು ನಿಜವಾಗಿಯೂ ಕೊರೋನಾ ವಾರಿಯರ್ಸ್ ಆಗಿದ್ದು, ಅವರಿಗೆ ಗೌರವ ಸಮರ್ಪಣೆ ಮಾಡುವ ಸಲುವಾಗಿ ನಮ್ಮ ಸಂಸ್ಥೆಯಿAದ ಗೌರವಪೂರ್ವಕವಾಗಿ ಮಾಸ್ಕ್ ಗಳನ್ನು ಹಾಗೂ ಐಸ್ ಕ್ರೀಮ್ ನೀಡಿ ಸತ್ಕರಿಸಲಾಗುತ್ತದೆ ಎಂದು ತಿಳಿಸಿದ ರಲ್ಲದೆ, ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೊರೋನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿAದ ಇನ್ನೂ ಹೆಚ್ಚಿನ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಗಿಫ್ಟಿಕಾನ್ ಸಲ್ಯೂಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಒಓ ಜಿಹಾನ್ ಚಾಂಗ್, ಸಂಸ್ಥೆಯ ಪ್ರತಿನಿಧಿಯಾದ ಆಶುರ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಮಾಸ್ಕ್ ಮತ್ತು ಐಸ್ ಕ್ರೀಮನ್ನು ವಿತರಿಸಿದರು.