ಬೊಮ್ಮಯಿಯವರ ಮನೆ ಕೋವಿಡ್-೧೯ ಕೇಂದ್ರ....
ಶಿಗ್ಗಾಂವಿ: ನಗರದ ಶಾಸಕರ ಮನೆಯಲ್ಲಿ ಕೋವಿಡ್-೧೯ ಚಿಕಿತ್ಸಾ ಕೇಂದ್ರ ೫೦ ಹಾಸಿಗೆಯದ್ದಾಗಿದ್ದು, ಸುಸಜ್ಜಿತವಾದ ಆಮ್ಲಜನಕದ ವ್ಯವಸ್ಥೆಯನ್ನು ಪರಿಶೀಲಿಸಿದ ಗೃಹ ಸಚಿವ ಬಸವರಾಜ ಬೊಮ್ಮಯಿ, ಸೋಂಕಿರೊಂದಿಗೆ ಕುಶಲೋಪರಿ ವಿಚಾರಿಸಿದರು. ಏನಮ್ಮಾ ಆರಾಮಾ ಇದೀರಾ, ಆರಾಮ ಇದ್ದೇರನಪ್ಪಾ, ದವಾಖಾನೆಕ್ಕಿಂತ ಚಲೋ ಐತರಿ ಅಂತ ಸೋಂಕಿತರು ಹೇಳಿದರು. ನಂತರ ವೈದ್ಯಕೀಯ ವ್ಯವಸ್ಥೆಯನ್ನು ಪರಿಶೀಲಿಸಿ ಡಾ. ಹನುಮಂತಪ್ಪ.ಪಿ.ಎಚ್. ಅವರನ್ನು ರೋಗಿಗಳಿಗೆ ಮಾತ್ರೆಗಳ ಹಾಗೂ ವೈದ್ಯಕೀಯ ಅನುಕೂಲಕರ ವ್ಯವಸ್ಥೆಯ ಬಗ್ಗೆ ಚರ್ಚೆಯನ್ನು ಮಾಡಿದರು.