ಶಾಸಕರ ಹೊಸ ಪ್ರಯತ್ನ ಕೊರೊನಾ ಸೋಂಕಿತರು ಫುಲ್ ಖುಷ್...

ದಾವಣಗೆರೆ: ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಪ್ರಕರಣಗಳು ಹಾಗೂ ಅದರ ಭಯದಿಂದಾಗಿ ಸೋಂಕಿತರು ಚಿಂತೆಗೀಡಾಗಿದ್ದಾರೆ. ಅವರೆಲ್ಲರೂ ಕೊರೊನಾ ಮಹಾಮಾರಿಯನ್ನು ಸ್ವಲ್ಪಮಟ್ಟಿಗೆ ಆದರೂ ಭಯ ಮರೆತು ಬೇಗ ಗುಣಮುಖರಾಗಲಿ ಎಂದು ಕ್ವಾರಂಟೈನ್ ನಲ್ಲಿದ್ದವರಿಗೆ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಿದ್ದ ಹೊನ್ನಳ್ಳಿ ತಾಲ್ಲೂಕಿನ ಶಾಸಕರಾದ ಎಮ್.ಪಿ. ರೇಣುಕಾಚಾರ್ಯ ಅವರು ತಾವೇ ಕುಣಿದು ರೋಗಿಗಳಿಗೆ ಧೈರ್ಯವನ್ನು ತುಂಬಿದ್ದಾರೆ, ಅವರ ಪತ್ನಿಯೂ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ... ಹಾಡಿಗೆ ಅವರು ನೃತ್ಯ ಮಾಡಿ ರೋಗಿಗಳಿಗೆ ಧೈರ್ಯ ತುಂಬಿದ್ದಾರೆ.