ವಿನಯ ಕುಲಕರ್ಣಿಗೆ ಜಾಮೀನು; ಅಭಿಮಾನಿಗಳಲ್ಲಿ ಹರ್ಷ | Dharwad |
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಗೆ ಕಳೆದ ಆಗಸ್ಟ್ ೧೧, ರಂದು ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ, ಮತ್ತೊಂದು ಪ್ರಕರಣದಲ್ಲಿ ಕೂಡಾ ಜಾಮೀನು ಸಿಕ್ಕಿದೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ವಿನಯ ಕುಲಕರ್ಣಿ ನಾಳೆ ಜೈಲಿನಿಂದ ಹೊರ ಬರಲಿದ್ದಾರೆ. ಇಂದು ಬೆಂಗಳೂರು ಹೈ ಕೊರ್ಟ್ನಲ್ಲಿ ಕೊಲೆ ಸಾಕ್ಷಿ ನಾಶದ ಪ್ರಕರಣದಲ್ಲಿ ವಿನಯ ಕುಲಕರ್ಣಿ ಜಾಮೀನು ಪಡೆದ ಹಿನ್ನೆಲೆ, ವಿನಯ ಕ್ಷೇತ್ರವಾದ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ ವಿನಯ ಕುಲಕರ್ಣಿ ಮನೆ ಬಳಿ ಕೂಡಾ ಬಂದಿದ್ದ ಬೆಂಬಲಿಗರು ಪಟಾಕಿ ಸಿಡಿಸಿ ಸಂತಸ ಪಟ್ಟರು. ನಾಳೆ ಜೈಲಿನಿಂದ ಬಿಡುಗಡೆಯಾದ ನಂತರ ಅವರು ಎಲ್ಲಿಗೆ ಹೋಗಲಿದ್ದಾರೆ ಎನ್ನುವೆದು ಕೂಡಾ ಕುತುಹಲ ಮೂಡಿಸಿದೆ.