ಬದಲಾದ ಸಮಯದಲ್ಲಿ ಪಂದ್ಯ ಆರಂಭ

ಬದಲಾದ ಸಮಯದಲ್ಲಿ ಪಂದ್ಯ ಆರಂಭ

ಟೀಮ್ ಇಂಡಿಯಾ- ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಡಿ.14ರಿಂದ ಆರಂಭವಾಗಲಿದ್ದು, ಏಕದಿನ ಸರಣಿ ಸೋತಿರುವ ಟೀಂ ಇಂಡಿಯಾ ಶತಾಯಗತಾಯ ಟೆಸ್ಟ್ ಸರಣಿ ಗೆಲ್ಲುವ ಪಣತೊಟ್ಟಿದೆ. ಈ ಹಿಂದೆ ಈ ಎರಡು ಟೆಸ್ಟ್ ಪಂದ್ಯಗಳಿಗೆ ನಿಗದಿ ಮಾಡಿದ ಸಮಯವನ್ನು ಕೊಂಚ ಬದಲಾವಣೆ ಮಾಡಲಾಗಿದೆ. ಈ ಮೊದಲು 3 ಏಕದಿನ ಪಂದ್ಯಗಳು ಹನ್ನೊಂದು ಗಂಟೆಗೆ ಆರಂಭವಾಗಿದ್ದವು. ಆದರೆ ಈ 2 ಟೆಸ್ಟ್ ಪಂದ್ಯಗಳ ಸರಣಿಯ ಸಮಯವನ್ನು ಬದಲಾಯಿಸಲಾಗಿದ್ದು, ಒಂಬತ್ತು ಗಂಟೆಗೆ ಪಂದ್ಯ ಆರಂಭವಾಗಲಿದೆ.