ಲೆಹಂಗಾದಲ್ಲಿ ಭಾರಿ ಪ್ರಮಾಣದ ಡ್ರಗ್ ವಶ

ಲೆಹಂಗಾದಲ್ಲಿ ಅಡಗಿಸಿ ವಿದೇಶಕ್ಕೆ ಸಾಗಣೆ ಮಾಡಲಾಗುತ್ತಿದ್ದ ಭಾರಿ ಪ್ರಮಾಣದ (ಮಾದಕ ವಸ್ತು,) ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಅಕ್ರಮವಾಗಿ ಲೆಹಂಗಾ ಬಟ್ಟೆಯಲ್ಲಿಟ್ಟು ವಿದೇಶಕ್ಕೆ ಡ್ರಗ್ ಸಾಗಣೆ ಮಾಡುತ್ತಿದ್ದ ಮಾದಕ ಜಾಲವನ್ನು ಎನ್ಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬೆಂಗಳೂರು ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕಾರಿನಲ್ಲಿ ಡ್ರಗ್ ಸಾಗಣೆ ಮಾಡುತ್ತಿದ್ದ ಬಿಹಾರ ಮೂಲದ ಡ್ರಗ್ ಪೆಡ್ಲರ್ಗಳನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಲೆಹಂಗಾದಲ್ಲಿ ಪೆಸುಡೋಫೆಡ್ರೈನ್ ಎಂಬ ಮಾದಕ ವಸ್ತುಗಳನ್ನು ಇಟ್ಟು ಆಸ್ಟ್ರೇಲಿಯಾಗೆ ಸಾಗಣೆ ಮಾಡುತ್ತಿದ್ದ ಡ್ರಗ್ ಮಾರಾಟ ಜಾಲವನ್ನು ಎನ್ಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇನ್ನೇನು ಆಸ್ಟ್ರೇಲಿಯಾಗೆ ರವಾನೆಯಾಗುತ್ತಿದ್ದ ಡ್ರಗ್ ಲೆಹಂಗಾಗಳನ್ನು ಎನ್ಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಸಂಬಂದ ಬೆಂಗಳೂರು ಮೂಲದ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದಾರೆ. ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸುವ ಸಲುವಾಗಿ ಲೆಹಂಗಾದಲ್ಲಿ ಮಾದಕ ವಸ್ತುಗಳನ್ನು ಇಟ್ಟು ವಿದೇಶಕ್ಕೆ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ನಕಲಿ ವಿಳಾಸ ನೀಡಿ ಡ್ರಗ್ ಸಾಗಣೆ ಮಾಡುತ್ತಿದ್ದ ಬೆಂಗಳೂರು ಮೂಲದ ಡ್ರಗ್ ಪೆಡ್ಲರ್ ಸಿಕ್ಕಿ ಬಿದ್ದಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬರುತ್ತಿದ್ದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿರುವ ಬೆಂಗಳೂರು ಎನ್ ಸಿಬಿ ಘಟಕದ ಅಧಿಕಾರಿಗಳು, ಮಾದಕ ವಸ್ತು.