ಸ್ಯಾಂಡಲವುಡ್ ನಟಿ ರಚಿತಾರಾಮ್ ಸಹೋದರಿ ನಿತ್ಯಾ ರಾಮ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ

ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಚಿತಾರಾಮ್ ಸಹೋದರಿ ನಿತ್ಯಾ ರಾಮ್ ಇಂದು ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಇಂದು ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆಗೈದಿದ್ದಾರೆ. ನಟಿ ರಚಿತಾ ರಾಮ್ ಸಹೋದರಿಯಾದ ನಿತ್ಯಾ ರಾಮ್ ವಿವಾಹದ ನಂತರ ವಿದೇಶದಲ್ಲಿ ನೆಲೆಸಿದ್ದರು. ಇದೀಗ ನಿತ್ಯಾ ರಾಮ್ ಬೆಂಗಳೂರಿನಲ್ಲಿರುವ ತನ್ನ ತವರು ಮನೆಗೆ ಬಂದಿದ್ದಾರೆ. ಈ ವೇಳೆ, ಸಹೋದರಿ, ಕುಟುಂಬ ಮತ್ತು ಸ್ನೇಹಿತರ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈ ನಡುವೆ ತಾವು ಮಿಸ್ ಮಾಡಿಕೊಂಡ ಹಲವು ವಿಶೇಷ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರ ಅಂಗವಾಗಿ ಇಂದು ಘಾಟಿ ಸುಭ್ರಹ್ಮಣ ಕ್ಷೇತ್ರಕ್ಕೆ ನಿತ್ಯಾ ರಾಮ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇಗುಲದಲ್ಲಿ ಒಂದಷ್ಟು ಸಮಯ ಕಳೆದ ನಿತ್ಯ ಹೊರಗೆ ಬಂದು ಸಣ್ಣ ಇನ್ಸ್ಟಾಗ್ರಾಂ ರೀಲ್ ಕೂಡ ಮಾಡಿದ್ದಾರೆ. ಡಲ್ ಪಿಂಕ್ ಆ್ಯಂಡ್ ಬ್ಲಾಕ್ ಬಣ್ಣದ ಮೈಸೂರು ಸಿಲ್ಕ್ ಸೀರೆ ಧರಿಸಿ ಮೆಟ್ಟಿಲಿನಿಂದ ಇಳಿದು ಬರುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. Temples are an expression of god's love. ಇಂದು ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದೆ,' ಎಂದು ಬರೆದು ಕೊಂಡಿದ್ದಾರೆ. ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಹಾರ್ಟ್ ಸಿಂಬಲ್ನ ಕಾಮೆಂಟ್ ಮಾಡಿದ್ದಾರೆ. ಹಲವು ತಿಂಗಳ ನಂತರ ನಿತ್ಯಾರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವುದಕ್ಕೆ ಫಾಲೋವರ್ಸ್ ಸಂಭ್ರಮ ವ್ಯಕ್ತ ಪಡಿಸಿದ್ದಾರೆ.ಸೆಪ್ಟೆಂಬರ್ ತಿಂಗಳಿನಲ್ಲಿ ನಿತ್ಯಾ ರಾಮ್ ಬೆಂಗಳೂರಿಗೆ ಆಗಮಿಸಿರುವ ವಿಚಾರವನ್ನು ತಂಗಿ ರಚಿತಾ ರಾಮ್ ಸ್ಪೆಷಲ್ ಆಗಿ ರಿವೀಲ್ ಮಾಡಿದ್ದರು. ಧನುಷ್ (Danush) ಅಭಿನಯದ ಕೋಲಾವೆರೆಡಿ ಡಿ ಹಾಡಿಗೆ ಅಕ್ಕನ ಜೊತೆಗಿರುವ ವಿಡಿಯೋ ಹಂಚಿಕೊಂಡಿದ್ದರು. 'ಸೂಪರ್ ಮಾಮಾ ರೆಡಿ 1...2...3. ಎಂದು ಹಾಡು ಬರುತ್ತಿದ್ದಂತೆ ನಿತ್ಯಾ ಕ್ಯಾಮೆರಾ ಮುಂದೆ ಬಂದಿದ್ದಾರೆ. ನಿತ್ಯಾ ಕೊನೆಯದಾಗಿ ನಟಿಸಿದ ಧಾರಾವಾಹಿ ನಂದಿನಿ (Nandini). ಜನನಿ ಪಾತ್ರದ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಉದ್ಯಮಿ ಗೌತಮ್ (Gautham) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಲೈಮ್ಲೈಟಿನಿಂದ ದೂರ ಉಳಿದಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.