ಭೂಕಬಳಿಕೆ ಹುನ್ನಾರ ಮಾಡಿ ರಾತ್ರೋ ರಾತ್ರಿ ಅನಧಿಕೃತವಾಗಿ ಶೆಡ್ ನಿರ್ಮಾಣ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಬಾನಳ್ಳಿ ಎಂಬಲ್ಲಿ ನಿವೇಶನ ರಹಿತ ಸೋಗಿನಲ್ಲಿ ಕೆಲ ವ್ಯಕ್ತಿಗಳು ಭೂಕಬಳಿಕೆ ಹುನ್ನಾರ ನಡೆಸಿ ರಾತ್ರೋ ರಾತ್ರಿ ಶೆಡ್ ನಿರ್ಮಾಣ ಮಾಡಿದ ಘಟನೆ ನಡೆದಿದೆ.ಫಲ್ಗುಣಿ ಗ್ರಾಮದ ಸರ್ವೇ ನಂಬರ್ 249ರ ಸರಕಾರಿ ಜಾಗದಲ್ಲಿ ಶೆಡ್ ಹಾಕಲಾಗಿತ್ತು. ಈ ಜಮೀನಿನಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಆಟದ ಮೈದಾನ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ದಾದಿಯರ ವಸತಿಗೃಹ ನಿರ್ಮಾಣ ಮಾಡುವ ಉದ್ದೇಶದಿಂದ ಜಾಗ ಮೀಸಲೀರಿಸಲಾಗಿದೆ ಎಂದು ಪಂಚಾಯಿತಿ ಮೂಲಗಳು ತಿಳಿಸಿವೆ.ಸ್ಥಳಕ್ಕೆ ಧಾವಿಸಿದ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಪೆÇಲೀಸ್ ಇಲಾಖೆ ಸಮ್ಮುಖದಲ್ಲಿ ಹಾಕಿದ್ದ ಎಲ್ಲಾ ಶೆಡ್ಗಳನ್ನು ತೆರವುಗೊಳಿಸಲಾಯಿತು. ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿಗಳಾದ ಉಮೇಶ್, ಸೋಮಶೇಖರ್, ಆನಂದ್, ನಮಿತ, ವಿನುತ, ನಿತ್ಯ, ಅನಿಷ, ರಮ್ಯಾ, ಅನುμÁ ಮತ್ತು ಕಂದಾಯ ಸಹಾಯಕರು ಇದ್ದರು.