ದೆಹಲಿ ಪಾಲಿಕೆ ಮತ ಎಣಿಕೆ: ಬಿಜೆಪಿ, ಆಪ್ ತಲಾ 2 ಸ್ಥಾನ ಗೆದ್ದು, 112 ರಲ್ಲಿ ಮುನ್ನಡೆ

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಪ್ ಮಧ್ಯೆ ತುರುಸಿನ ಸ್ಪರ್ಧೆ ನಡೆಯುತ್ತಿದೆ. 10.30 ರ ಸುಮಾರಿಗೆ ಮತಎಣಿಕೆಯಲ್ಲಿ ಎರಡೂ ಪಕ್ಷಗಳು ತಲಾ 2 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಅಲ್ಲದೇ, 112 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇನ್ನು ಕಾಂಗ್ರೆಸ್ 12 ಸ್ಥಾನ, ಸ್ವತಂತ್ರ 4, ಬಿಎಸ್ಪಿ, ಎನ್ಸಿಪಿ ತಲಾ ಒಂದು ಸ್ಥಾನಗಳಲ್ಲಿ ಮುಂದಿವೆ.ಪಾಲಿಕೆಯ 250 ವಾರ್ಡ್ಗಳಿಗೆ ಡಿಸೆಂಬರ್ 4 ರಂದು ಚುನಾವಣೆ ನಡೆದಿತ್ತು. ಶೇ.50 ರಷ್ಟು ಮತದಾನವಾಗಿದೆ.