ನ್ಯೂಜಿಲೆಂಡ್‌ನಲ್ಲಿ ತುರ್ತುಸ್ಥಿತಿ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ಗೆ ಗೇಬ್ರಿಯೆಲ್ ಚಂಡಮಾರುತ ಅಪ್ಪಳಿಸಿದ್ದು, ವ್ಯಾಪಕ ಹಾನಿ ಆಗಿದೆ. ಚಂಡಮಾರು
ತವು ತಂದೊಡ್ಡಿರುವ ವಿನಾಶ ಮತ್ತು ವ್ಯಾಪಕ ಪ್ರವಾಹದಿಂದಾಗಿ ಸರ್ಕಾರವು ಮಂಗಳವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.
'ನ್ಯೂಜಿಲೆಂಡ್ ಜನರಿಗೆ ಈ ಚಂಡಮಾರುತವು ನಿಜವಾದ ಅಪಾಯ ತಂದೊಡ್ಡಿದೆ' ಎಂದು ತುರ್ತುಸ್ಥಿತಿ ನಿರ್ವಹಣಾ ಸಚಿವ ಕೀರನ್ ಮ್ಯಾಕ್
ಅನ್ನಾಲ್ಟಿ ಸುದ್ದಿಗಾರರಿಗೆ ತಿಳಿಸಿದರು.
ವಿಮಾನ, ರೈಲು ಹಾಗೂ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಯಿತು. ಏರ್ ನ್ಯೂಜಿಲೆಂಡ್ 500ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದುಗೊಳಿಸಿತು.