8 ತಿಂಗಳಲ್ಲಿ 46 ಕೆಜಿ ತೂಕ ಇಳಿಸಿಕೊಂಡ ಪೊಲೀಸ್‌ ಅಧಿಕಾರಿ

8 ತಿಂಗಳಲ್ಲಿ 46 ಕೆಜಿ ತೂಕ ಇಳಿಸಿಕೊಂಡ ಪೊಲೀಸ್‌ ಅಧಿಕಾರಿ

ಹೊಸದಿಲ್ಲಿ: ದಿಲ್ಲಿಯ ಪೊಲೀಸ್‌ ಅಧಿಕಾರಿಯೊಬ್ಬರು ಸೂಕ್ತ ಜೀವನ ಕ್ರಮ, ಆಹಾರ ಪದ್ಧತಿ ಪಾಲನೆ ಮತ್ತು ವ್ಯಾಯಾಮ ದಿಂದ 8 ತಿಂಗಳ ಅವಧಿಯಲ್ಲಿ ಬರೋಬ್ಬರಿ 46 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ದಿಲ್ಲಿ ಪೊಲೀಸ್‌ ಆಯುಕ್ತರಿಂದ ಪ್ರಶಂಸೆ ವ್ಯಕ್ತವಾಗಿದೆ

ಡಿಸಿಪಿ ಜಿತೇಂದ್ರ ಮಣಿ ಅವರ 130 ಕೆಜಿ ತೂಕವಿದ್ದರು. ಜತೆಗೆ ಮಧುಮೇಹ, ಅತಿ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ ಕಾರಣ ದಿಂದ ಬಳಲುತ್ತಿದ್ದರು.

ಜೀವನದಲ್ಲಿ ಬದಲಾವಣೆ ಬಯಸಿದ ಅವರು, ಜೀವನ ಕ್ರಮ ದಲ್ಲಿ ಸಂಪೂರ್ಣ ಶಿಸ್ತು ಪಾಲಿಸಿ ದರು. ಎಂಟು ತಿಂಗಳ ಕಾಲ ಪ್ರತೀ ದಿನ 15,000 ಮೆಟ್ಟಿಲುಗಳನ್ನು ಹತ್ತುವುದು – ಇಳಿಯುವುದು ಮಾಡಿದರು. ಚಪಾತಿ, ಅನ್ನ ತಿನ್ನುವ ಬದಲಾಗಿ ಸೂಪ್‌, ತರಕಾರಿ, ಹಣ್ಣುಗಳನ್ನು ತಿನ್ನಲು ಆರಂಭಿಸಿದರು. ಈ ನಿಯಮಗಳ ಕಠಿನ ಪಾಲನೆಯಿಂದಾಗಿ ಎಂಟು ತಿಂಗಳಲ್ಲಿ ಅವರ ಸೊಂಟದ ಸುತ್ತಳತೆ 12 ಇಂಚು ಕಡಿಮೆಯಾಯಿತು. ಈಗ ಅವರು 84 ಕೆಜಿ ತೂಕವಿದ್ದಾರೆ. ಈ ಕಾರ್ಯಕ್ಕೆ ಜಿತೇಂದ್ರ ಅವರನ್ನು ದಿಲ್ಲಿ ಪೊಲೀಸ್‌ ಆಯುಕ್ತರು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.