ಟಿಪ್ಪು ಎಕ್ಸ್‌ ಪ್ರೆಸ್‌ ರೈಲು ಹೆಸರು ಬೇಕಂತಲೇ ಬದಲಿಸಿದ್ದೇನೆ; ಪ್ರತಾಪ್‌ ಸಿಂಹ ಸಮರ್ಥನೆ

ಟಿಪ್ಪು ಎಕ್ಸ್‌ ಪ್ರೆಸ್‌ ರೈಲು ಹೆಸರು ಬೇಕಂತಲೇ ಬದಲಿಸಿದ್ದೇನೆ; ಪ್ರತಾಪ್‌ ಸಿಂಹ ಸಮರ್ಥನೆ

ಮೈಸೂರು: ಟಿಪ್ಪು ಎಕ್ಸ್‌ ಪ್ರೆಸ್‌ ರೈಲು ಹೆಸರು ಬೇಕಂತಲೇ ಬದಲಿಸಿದ್ದೇನೆ ಎಂದು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಸಮರ್ಥನೆ ಮಾಡಿಕೊಂಡಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ರೈಲಿನ ಹೆಸರು ಬದಲಿಸಿದ ಉದಾಹರಣಗಳೇ ಇಲ್ಲ. ನಾನು ಪ್ರಯತ್ನ ಪಟ್ಟು ರೈಲಿನ ಹೆಸರು ಬದಲಿಸಿದ್ದೇನೆ. ಟಿಪ್ಪು ಏನು ಮೈಸೂರಿನವನಾ…? ಶ್ರೀರಂಗಪಟ್ಟಣದವನು ಎಂದು ಕಿಡಿಕಾರಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಈಚೆಗಷ್ಟೇ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಮರು ನಾಮಕರಣ ಮಾಡಿದೆ ಟಿಪ್ಪು ಎಕ್ಸ್‌ಪ್ರೆಸ್‌ ಬದಲಾಗಿ ಒಡೆಯರ್‌ ಎಕ್ಸ್‌ಪ್ರೆಸ್‌ ಎಂದು ಮರುನಾಮಕರಣ ಮಾಡಿದೆ.ಮರುನಾಮಕರಣವನ್ನು ಬಹುತೇಕರು ಸ್ವಾಗತಿಸಿದರೆ, ಇನ್ನು ಕೆಲವರು ಟಿಪ್ಪು ಹೆಸರು ಬದಲಾಯಿಸಿರುವುದಕ್ಕೆ ಕೆಲವೊಂದು ಕಡೆ ಆಕ್ಷೇಪಗಳೂ ಕೂಡ ವ್ಯಕ್ತಪಡಿಸಿದ್ದರು.