ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ಹೊಸಪೇಟೆ : ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಸಂಘ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ವೆಬ್‍ಸೈಟ್ ನಲ್ಲಿ ಅಥವಾ ಹೊಸಪೇಟೆಯ ಹೊಸ ಎಮ್.ಸಿ.ಹೆಚ್ ಆಸ್ಪತ್ರೆ ಹಿಂಭಾಗದ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು.

ಅರ್ಜಿಗಳನ್ನು ಜ.13ರಿಂದ 21ರವರೆಗೆ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜ.21 ಸಂಜೆ 5.30ರೊಳಗಾಗಿ ಸಲ್ಲಿಸಬೇಕು. ಹುದ್ದೆಗಳ ವಿವರ: ಎಸ್‍ಎನ್‍ಸಿಯು ವೈದ್ಯಾಧಿಕಾರಿಗಳ ಹುದ್ದೆ 02 ಇದ್ದು, ವಿದ್ಯಾರ್ಹತೆ ಎಂಬಿಬಿಎಸ್ ಆಗಿರಬೇಕು. ಯುಪಿಹೆಚ್‍ಸಿ ವೈದ್ಯಾಧಿಕಾರಿಗಳ ಹುದ್ದೆ 03 ಇದ್ದು, ವಿದ್ಯಾರ್ಹತೆ ಎಂಬಿಬಿಎಸ್ ಪದವಿ ಹೊಂದಿರಬೇಕು. ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು-03 ಹುದ್ದೆಗೆ ಎಂಬಿಬಿಎಸ್ ಅಥವಾ ಬಿಎಎಂಎಸ್ ಪದವಿ, ಆಯುಷ ವೈದ್ಯಾಧಿಕಾರಿಗಳು-02 ಹುದ್ದೆಗೆ ಬಿಎಎಂಎಸ್, ಎನ್‍ಹೆಚ್‍ಎಂಎಸ್, ಬಿಎನ್‍ವೈಎಸ್, ಬಿಯುಎಂಎಸ್ ಪದವಿ, ಆಶಾ ಮೇಲ್ವಿಚಾರಕರು (ಮಹಿಳೆ)-01 ಹುದ್ದೆಗೆ ಜಿಎನ್‍ಎಂ, ಬಿಎಸ್ಸಿ ನರ್ಸಿಂಗ್, ಡಿಪ್ಲೋಮಾ ಇನ್ ನರ್ಸಿಂಗ್ ಹೊಂದಿರಬೇಕು.

ಶುಶ್ರೂಷಕಿಯರು (ಮಹಿಳೆ)-10 ಹುದ್ದೆಗೆ ಬಿಎಸ್ಸಿ, ಪಿಬಿಬಿಎಸ್, ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಹತೆ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ-01 ಹುದ್ದೆಗೆ ಎಲ್‍ಹೆಚ್‍ವಿ ಯುಪಿಹೆಚ್‍ಸಿ ಪದವಿ, ಪಿ.ಹೆಚ್.ಸಿ.ಓ (ಮಹಿಳೆ ಎ.ಎನ್.ಎಂ)-05 ಹುದ್ದೆಗೆ ಎಎನ್‍ಎಂ, ಪ್ರಯೋಗಶಾಲಾ ತಂತ್ರಜ್ಞರು (ರಕ್ತ ಶೇಖರಣ ಘಟಕ)-01 ಹುದ್ದೆಗೆ ಬಿಎಂಎಲ್‍ಟಿ, ಡಿಎಂಎಲ್‍ಟಿ ಪದವಿ, ಪ್ರಯೋಗಶಾಲಾ ತಂತ್ರಜ್ಞರು (ಓUಊಒ)-01 ಹುದ್ದೆಗೆ ಬಿಎಂಎಲ್‍ಟಿ, ಡಿಎಂಎಲ್‍ಟಿ ಪದವಿ, ನೇತ್ರ ಸಹಾಯಕರು-01 ಹುದ್ದೆಗೆ ಡಿಪ್ಲೋಮಾ ಇನ್ ಆಪ್ತೋಮೆಟ್ರಿ, ಆಪ್ತಲ್ಮಿಕ್ ಅಸಿಸ್ಟಂಟ್ ವಿದ್ಯಾರ್ಹತೆ, ಒಟಿ ಟೆಕ್ನಿಷಿಯನ್ 01 ಹುದ್ದೆಗೆ ಡಿಪ್ಲೋಮಾ ಇನ್ ಆಪರೇಷನ್ ಥೇಯಟರ್ ವಿದ್ಯಾರ್ಹತೆ ಹೊಂದಿರಬೇಕು.

ಸೂಚನೆ: ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚುಗೊಳಿಸುವುದು ಅಥವಾ ಕಡಿಮೆಗೊಳಿಸುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ನಿರ್ಧಾರದಂತಿರುತ್ತದೆ. ಆಯ್ಕೆಯ ಪ್ರಕ್ರಿಯೆ ಯಾವುದೇ ಬದಲಾವಣೆಯಾದರು ಆಯ್ಕೆ ಸಮಿತಿ ತಿರ್ಮಾನವೇ ಅಂತಿಮವಾಗಿರುತ್ತದೆ. ಕೋವಿಡ್-19 ರಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸದವರಿಗೆ ಆದ್ಯತೆ ನೀಡಲಾಗುವುದು, 6 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.2, 6 ತಿಂಗಳು 1 ದಿನದಿಂದÀ 12 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.4, 12 ತಿಂಗಳು 1 ದಿನದಿಂದÀ 18 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.6, 18 ತಿಂಗಳು 1 ದಿನದಿಂದÀ 24 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.8ರಷ್ಟು ಕೃಪಾಂಕವನ್ನು ನೀಡಲಾಗುವುದು. ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಶೇಕಡ ಮತ್ತು ಕೋವಿಡ್-19 ಸೇವಾ ಅವಧಿಯ ಕೃಪಾಂಕವನ್ನು ಒಟ್ಟುಗೂಡಿಸಿ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು ಮತ್ತು ಹೊಸ ರೋಸ್ಟರ್ ಆಧಾರದ ಮೇಲೆ ಮೇರಿಟ್ ಕಂ ರೋಸ್ಟರ್ ಆಧಾರ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಮಾಡಲಾಗುವುದು. ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳ ಹುದ್ದೆಗೆ ಹುದ್ದೆಗಳ ಸಂಖ್ಯೆ ತುಂಬುವವರೆಗೆ ವಾಕ್ ಇನ್ ಮೂಲಕ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು.