"ನಮ್ಮ ಗಂಗಮ್ಮ ಕಾಣೆಯಾಗಿದ್ದಾಳೆ.. ದಯವಿಟ್ಟು ಹುಡುಕಿಕೊಡಿ" - ನಟಿ ಸುಧಾರಾಣಿ ಮನವಿ!

"ನಮ್ಮ ಗಂಗಮ್ಮ ಕಾಣೆಯಾಗಿದ್ದಾಳೆ.. ದಯವಿಟ್ಟು ಹುಡುಕಿಕೊಡಿ" - ನಟಿ ಸುಧಾರಾಣಿ ಮನವಿ!

ನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿಗೆ ನಾಯಿಗಳಂದರೆ ಬಲು ಪ್ರೀತಿ. ಮನೆಯಲ್ಲಿ ಎರಡು ಸಾಕು ನಾಯಿಗಳಿದ್ದರೂ, ಬೀದಿ ನಾಯಿ ಮೇಲೂ ಪ್ರೀತಿ ತೋರಿಸದ್ದರು. ಕೆಲವುಗಳ ದಿನ ಹಿಂದೆ ಅವರ ಮನೆಯ ಬೀದಿಯ ನಾಯಿ ಗಂಗಮ್ಮ ಮರಿ ಹಾಕಿದ್ದನ್ನು ಕಂಡು ಸಂಭ್ರಮಿಸಿದ್ದರು.

ನಟಿ ಸುಧಾರಾಣಿ‌ ಸಾಕಿದ್ದ ಪ್ರೀತಿಯ ಗಂಗಮ್ಮ‌ ನಾಯಿ ಕಾಣೆಯಾಗಿದ್ದು, ನಿಮ್ಮ ಗಮನಕ್ಕೆ ಬಂದರೆ ತಿಳಿಸಿ ಎಂದು ಬಿಬಿಎಂಪಿ ಹಾಗೂ ಜನರನ್ನು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಗಂಗಮ್ಮ ಕಾಣಿಸುತ್ತಿಲ್ಲ

"ನಿಮಗೆಲ್ಲರಿಗೂ ಗೊತ್ತೇ ಇದೆ. ನಾನು ಹಲವಾರು ಬಾರಿ ಪೋಸ್ಟ್ ಹಾಕಿದ್ದೀನಿ. ಸುಮಾರು 15 ದಿನಗಳಿಂದ ನಮ್ಮ ಗಂಗಮ್ಮ ಕಾಣಿಸುತ್ತಿಲ್ಲ. ಏನಾದ್ರೂ, ಬಿಬಿಎಂಪಿನವರು, ಡಾಗ್ಸ್ ಅನ್ನು ಬೇರೆ ಕಡೆ ಕರೆದುಕೊಂಡು ಹೋದಾಗ, ಅವಳು ಏನಾದರೂ ನಿಮ್ಮ ಏರಿಯಾದಲ್ಲಿ ಕಾಣಿಸಿಕೊಂಡರೆ, ದಯವಿಟ್ಟು ನನ್ನನ್ನು ಟ್ಯಾಗ್ ಮಾಡಿ ಒಂದು ಪೋಸ್ಟ್ ಹಾಕಿ." ಎಂದು ಸುಧಾರಾಣಿ ಬೇಸರದಲ್ಲೇ ವಿಡಿಯೋ ಮಾಡಿದ್ದಾರೆ.

'ಗಂಗಮ್ಮ ವಾಪಾಸ್ ಬರಬೇಕು'

ಕೆಲವು ದಿನಗಳಿಂದಷ್ಟೇ ನಟಿ ಸುಧಾರಾಣಿ ಸೋಶಿಯಲ್ ಮೀಡಿಯಾದಲ್ಲಿ ಗಂಗಮ್ಮ ಕಾಣಿಸುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದರು. ಈಗ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಮತ್ತೆ ಗಂಗಮ್ಮ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

"ನಾವೆಲ್ಲರೂ ಅವಳನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದೇವೆ. ಅವಳು ಮನೆ ವಾಪಾಸ್ ಬರಬೇಕು ಅನ್ನೋದು ನಮ್ಮ ಆಸೆ. ದಯವಿಟ್ಟು ನೀವು ಯಾರಾದರೂ ಗಂಗಮ್ಮನನ್ನು ನೋಡಿದರೆ, ನನಗೆ ತಿಳಿಸಿ. ನಾವು ಹುಡುಕುವುದಕ್ಕೆ ತುಂಬಾನೇ ಪ್ರಯತ್ನ ಪಡುತ್ತಿದ್ದೇವೆ. ಬಿಬಿಎಂಪಿಯಿಂದ ಹಿಡಿದು ಪ್ರತಿಯೊಂದರಲ್ಲೂ ಹುಡುಕಿದ್ದೇವೆ. ಒಂದೇ ಒಂದು ಲೀಡ್ ಸಿಕ್ಕಿಲ್ಲ." ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗಂಗಮ್ಮ ಮರಿ ಹಾಕಿದ್ದಾಗ ಸಂಭ್ರಮ

ನಟಿ ಸುಧಾರಾಣಿ ಮನೆಯ ಬೀದಿಯಲ್ಲಿ ಗಂಗಮ್ಮ ಅನ್ನೋ ಬೀದಿ ನಾಯಿ ಇತ್ತು. ಅದನ್ನೂ ತಮ್ಮ ಮನೆಯಲ್ಲಿರುವ ನಾಯಿಯಂತೆಯೇ ಸಾಕಿದ್ದರು. ಗಂಗಮ್ಮ ಮರಿ ಹಾಕಿದಾಗ, ಮರಿ ಜೊತೆಗೆ ಗಂಗಮ್ಮಳನ್ನು ಮನೆಗೆ ಕರೆತಂದು ಸ್ವತ: ಸುಧಾರಾಣಿಯವೇ ಮನೆಯಲ್ಲಿ ಪೂಜೆ ಮಾಡಿದ್ದರು. ಇದೇ ನಾಯಿ ಈಗ ಕಳೆದ 15 ದಿನಗಳಿಂದ ಕಾಣಿಯಾಗಿದೆ. ಎಲ್ಲಿಗೆ ಹೋಗಿದೆ ಅನ್ನೋದು ಗೊತ್ತಿಲ್ಲ. ಹೀಗಾಗಿ ಮಿಸ್ ಆಗಿ ಬಿಬಿಎಂಪಿಯವರು ನಾಯಿಯನ್ನು ಕರೆದುಕೊಂಡು ಹೋಗಿದ್ದರೆ, ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

'ಮನೆಯೊಳಗೆ ಮಿನಿ ಮತ್ತು ಮಿಕ್ಕಿ' 

ಸುಧಾರಾಣಿ ಹಾಗೂ ಅವರ ಮಗಳಿಗೆ ನಾಯಿಗಳಂದರೆ, ಬಲುಪ್ರೀತಿ. ಹೀಗಾಗಿ ಮನೆಯಲ್ಲಿ ಮಿನಿ ಮತ್ತು ಮಿಕ್ಕಿ ಎಂಬ ಎರಡು ನಾಯಿಯನ್ನು ಮುದ್ದಾಗಿ ಸಾಕಿದ್ದಾರೆ. ಗಂಗಮ್ಮ ಕೂಡ ಇವರ ಮನೆಯ ಒಂದು ಭಾಗವಾಗಿತ್ತು. ಇತ್ತೀಚೆಗೆ ಗಂಗಮ್ಮ ಬರ್ತ್‌ಡೇಯನ್ನೂ ಆಚರಿಸಲಾಗಿತ್ತು. ಸದ್ಯ ಸುಧಾರಾಣಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸುಧಾರಾಣಿ ನಟಿಸುತ್ತಿದ್ದಾರೆ.