ಕೋಲಾರದಲ್ಲಿ ಸಿದ್ದರಾಮಯ್ಯಗಾಗಿ ವಾಸ್ತು ಪ್ರಕಾರ ಮನೆ ರೆಡಿ; ಇದರ ವಿಶೇಷತೆ ಏನು

ಇಷ್ಟು ದಿನ ಕ್ಷೇತ್ರಕ್ಕಾಗಿ ಹುಡುಕಾಡುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಕೋಲಾರ ಫಿಕ್ಸ್ ಆಗಿತ್ತು. ಈ ಬೆನ್ನಲ್ಲೇ ಕೋಲಾರದಲ್ಲಿ ಉಳಿದುಕೊಳ್ಳಲು ಮನೆ ಹುಡುಕ್ತಿದ್ದ ಸಿದ್ದರಾಮಯ್ಯಗೆ ಮನೆ ಕೂಡ ಫೈನಲ್ ಆಗಿದೆ. ಅಪ್ಪನಿಗಾಗಿ ವಾಸ್ತುಪ್ರಕಾರದ ಮನೆ ಹುಡುಕಿದ್ದಾರಂತೆ ಪುತ್ರ ಯತೀಂದ್ರ.
ಕೋಲಾರದಲ್ಲಿ ಸಿದ್ದರಾಮಯ್ಯಗಾಗಿ ಮನೆ ಫೈನಲ್!
ಕಾಂಗ್ರೆಸ್ನ ಮಾಸ್ ಲೀಡರ್ ಎನಿಸಿಕೊಂಡಿರೋ ಸಿದ್ದರಾಮಯ್ಯ ಈ ಬಾರಿ ಕೋಲಾರದಿಂದ ಸ್ಪರ್ಧಿಸೋದು ಖಚಿತ ಆಗಿದೆ. ಬದಾಮಿ ಬಿಟ್ಟು ಬಂದಿದ್ದ ಸಿದ್ದರಾಮಯ್ಯ ನೆಲೆ ಕಂಡುಕೊಳ್ತಿರೋದು ಚಿನ್ನದನಾಡಲ್ಲಿ.. ಕೋಲಾರದಲ್ಲಿ ನಿಲ್ಲೋದು ಪಕ್ಕಾ ಆದ್ಮೇಲೆ ಈಗ ಇರೋಕೆ ಒಂದು ಮನೆ ಬೇಕಲ್ಲ.. ಹೀಗಾಗಿ ಮನೆ ಕೂಡ ಫೈನಲ್ ಆಗಿದೆ. ಕಳೆದ 10 ದಿನಗಳಿಂದ ಮನೆಗಾಗಿ ಕಾಂಗ್ರೆಸ್ ನಾಯಕರು ಹುಡುಕಾಟ ನಡೆಸುತ್ತಿದ್ರು. ಸದ್ಯ ಕೋಲಾರ ಹೊರವಲಯದಲ್ಲಿರುವ ಮನೆ ಫೈನಲ್ ಆಗಿದ್ದು ವಾಸ್ತುಪ್ರಕಾರದ ಮನೆಯನ್ನೇ ಹುಡುಕುವಂತೆ ಶಾಸಕ ಡಾ.ಯತೀಂದ್ರ ಸೂಚಿಸಿದ್ದರಂತೆ.
ಕೋಲಾರದ ಹೊರವಲಯದ ಕೋಗಿಲಹಳ್ಳಿಯಲ್ಲಿ ಸಿದ್ದರಾಮಯ್ಯಗಾಗಿ ಮನೆ ಹುಡುಕಲಾಗಿದ್ದು ಇದು ಕುರುಬರಪೇಟೆ ನಿವಾಸಿಯೊಬ್ಬರಿಗೆ ಸೇರಿರುವ ಮನೆ ಆಗಿದೆ. ಸೂರ್ಯ ಹುಟ್ಟುವ ಬಾಗಿಲಿರುವ ಮನೆಯನ್ನು ಕಾಂಗ್ರೆಸ್ ನಾಯಕರು ಹುಡುಕಿದ್ದು 1 ಎಕರೆ ವಿಶಾಲವಾದ ಪ್ರದೇಶ, 56 ಅಡಿ ಉದ್ದ, 46 ಅಗಲ ವಿಸ್ತೀರ್ಣದ ಮನೆ ಫಿಕ್ಸ್ ಆಗಿದೆ. ಇನ್ನು ನೆಲಮಹಡಿಯ ಐಷಾರಾಮಿ ಮನೆಯಲ್ಲಿದೆ ಹಾಲ್, ಡೈನಿಂಗ್ ಹಾಲ್ ಜೊತೆಗೆ ಎರಡು ರೂಂ, ದೇವರ ಮನೆ, ಓಪನ್ ಕಿಚನ್ ಇದೆ.
ಮನೆಯ ಸುತ್ತಲೂ ತೋಟಗಾರಿಕೆ ಬೆಳೆ, ಸಭೆ ಸಮಾರಂಭಕ್ಕೆ ಜಾಗ ಕೂಡ ಇದೆ. ವಾಸ್ತು ಪ್ರಕಾರದ ಮನೆ ಹುಡುಕುವಂತೆ ಸಿದ್ದರಾಮಯ್ಯ ಪುತ್ರ ಶಾಸಕ ಡಾ.ಯತೀಂದ್ರಗೆ ತಿಳಿಸಿದ್ದರಂತೆ. ಸಿದ್ದರಾಮಯ್ಯ ಹೇಳಿದ್ದಂತೆ ಹೈವೇ ಪಕ್ಕದ ಸರ್ವೀಸ್ ರಸ್ತೆಯಲ್ಲೇ ಮನೆ ಇದ್ದು ವಿಸ್ತಾರವಾದ ಪ್ರದೇಶದ ತೋಟದ ಮನೆ, ಕಾಂಪೌಂಡ್ ಇರುವ ಮನೆಯಾಗಿದೆ. ಇನ್ನು ಸಿದ್ದರಾಮಯ್ಯ ಮನೆ ನೋಡಿ ಅಂತಿಮ ಗೊಳಿಸಬೇಕಾಗಿದೆ.