ಈ ಕಾರ್ಯಕ್ರಮ ಬರುವವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಬೆಂಗಳೂರಲ್ಲಿ ಭದ್ರತೆಗೆ 1,200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. 9 ಡಿಸಿಪಿ, 16 ಎಸಿಪಿ, 45 ಇನ್ಸ್ಪೆಕ್ಟರ್ಗಳು, 101 ಪಿಎಸ್ಐ, 14 ಮಹಿಳಾ ಪಿಎಸ್ಐ, 83 ಎಎಸ್ಐ, 577 ಹೆಡ್ ಕಾನ್ಸ್ಟೇಬಲ್ಸ್, 77 ಮಹಿಳಾ ಸಿಬ್ಬಂದಿ, ಮಫ್ತಿಯಲ್ಲಿ 172 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹಾಗೂ ಹೆಚ್ಚುವರಿ ಭದ್ರತೆಗೆ 10 KSRP ತುಕಡಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಮಾಣೆಕ್ ಷಾ ಮೈದಾನದ ಸುತ್ತಮುತ್ತ 56 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಗ್ನಿಶಾಮಕ ವಾಹನಗಳು, 2 ಆಯಂಬುಲೆನ್ಸ್, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿಸ್ವಾಟ್, 1 ಆರ್ ಐವಿ, 1 ಗರುಡಾ, ಮೈದಾನದ ಆಯಾಕಟ್ಟಿನಲ್ಲಿ 100 ಸಿಸಿಟಿವಿ ಅಳವಡಿಸಲಾಗಿದೆ. 4 ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್ ಎಂಡಿ ಹಾಗೂ 24 ಹೆಚ್ಚ ಹೆಚ್ ಎಂಡಿ ಉಪಕರಣಗಳ ಬಳಕೆ ಮಾಡಲಾಗುತ್ತಿದೆ.ಇನ್ನು ಕಾರು ಪಾಸ್ ಗಳನ್ನ ಹೊಂದಿರೋ ಆಹ್ವಾನಿತರು ಪಾಸ್ ಗಳಲ್ಲಿ ನಿಗದಿ ಪಡಿಸಿದ ಸ್ಥಳಗಳಲ್ಲೇ ಕಾರು ಪಾರ್ಕಿಂಗ್ ಮಾಡಬೇಕು. ಜನವರಿ 26 ರ ಬೆಳಗ್ಗೆ 8.30 ರಿಂದ 10.30 ರವರೆಗೂ ಕಬ್ಬನ್ ರಸ್ತೆಯಲ್ಲಿ ಬಿಆರ್ ವಿ ಜಂಕ್ಷನ್ ನಿಂದ ಕಾಮರಾಜ್ ರಸ್ತೆ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧವಿರಲಿದೆ.