ʻಏರ್ ಇಂಡಿಯಾ ವಿಮಾನʼದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ ಕುಡುಕ

ʻಏರ್ ಇಂಡಿಯಾ ವಿಮಾನʼದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ ಕುಡುಕ

ನವದೆಹಲಿ: ಏರ್ ಇಂಡಿಯಾದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಡುಕನೊಬ್ಬ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನವೆಂಬರ್‌ನಲ್ಲಿ ನಡೆದಿತ್ತು. ಇದೀಗ ಆತನನ್ನು ʻನೊ ಫ್ಲೈ ಲಿಸ್ಟ್‌ʼಗೆ ಸೇರಿಸಲು ಏರ್‌ಲೈನ್ಸ್ ತಿಳಿಸಿದೆ. ನ.26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ 70 ವರ್ಷದ ಮಹಿಳೆ ಮೇಲೆ ಕುಡುಕ ಮೂತ್ರ ವಿಸರ್ಜನೆ ಮಾಡಿದ್ದಾರೆ. ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.