ಚಿಕ್ಕಮಗಳೂರು: ಆನ್ ಲೈನ್ ಎಡವಟ್ಟು, ಟಿಇಟಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು

ಚಿಕ್ಕಮಗಳೂರು: ಆನ್ ಲೈನ್ ಎಡವಟ್ಟು, ಟಿಇಟಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು

ಚಿಕ್ಕಮಗಳೂರು : ಆನ್ ಲೈನ್ ನಲ್ಲಿ ಹಾಲ್ ಟಿಕೆಟ್ ಡೌನ್ ಲೋಡ್ ಮಾಡುವ ವೇಳೆ ಎರಡು ಬಾರಿ ಪ್ರತ್ಯೇಕ ಸೆಂಟರ್ ತೋರಿಸಿದ ಪರಿಣಾಮ ಬಳ್ಳಾರಿಯಿಂದ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಬ್ಬರು ಪರೀಕ್ಷೆಯಿಂದ ವಂಚಿತರಾದ ಘಟನೆ ಬೆಳಕಿಗೆ ಬಂದಿದೆ.

ಬಳ್ಳಾರಿಯಿಂದ ಚಿಕ್ಕಮಗಳೂರಿಗೆ ವಿದ್ಯಾರ್ಥಿಗಳು ಟಿಇಟಿ ಪರೀಕ್ಷೆ ಬರೆಯಲು ಬಂದಿದ್ದಾರೆ, ಅದಕ್ಕೂ ಮೊದಲು ಆನ್ ಲೈನ್ ನಲ್ಲಿ ಪರೀಕ್ಷಾ ಕೇಂದ್ರ ಪರಿಶೀಲಿಸಿದಾಗ ಒಂದು ಕೇಂದ್ರದ ವಿವರ ಬಂದಿದೆ ಅದರಂತೆ ವಿದ್ಯಾರ್ಥಿ ಆ ವಿಳಾಸಕ್ಕೆ ಹೋಗಿ ತನ್ನ ರಿಜಿಸ್ಟರ್ ನಂಬರ್ ಪರಿಶೀಲಿಸಿದಾಗ ಅಲ್ಲಿ ಆತನ ವಿವರ ಇರಲಿಲ್ಲ, ಇದರಿಂದ ವಿಚಲಿತನಾದ ವಿದ್ಯಾರ್ಥಿ ಆನ್ ಲೈನ್ ನಲ್ಲಿ ಮತ್ತೊಮ್ಮೆ ತನ್ನ ಹಾಲ್ ಟಿಕೆಟ್ ಪರಿಶೀಲಿಸಿದಾಗ ಇನ್ನೊಂದು ಶಾಲೆಯ ವಿಳಾಸ ತೋರಿಸಿದೆ ಕೂಡಲೇ ಅಲ್ಲಿಂದ ಎರಡನೇ ವಿಳಾಸಕ್ಕೆ ಬಂದಾಗ ವಿದ್ಯಾರ್ಥಿಗೆ ಅಲ್ಲಿನ ಸಿಬಂದಿಗಳು ಇಲ್ಲದ ಸಬೂಬು ನೀಡಿ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶ ನಿರಾಕರಿಸಿದ್ದಾರೆ.

ವಿಚಲಿತನಾದ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತನಾಗಿದ್ದಾನೆ. ಈ ಕುರಿತು ವಿದ್ಯಾರ್ಥಿ ಬಸವನಹಳ್ಳಿ ಶಾಲೆ ಪರೀಕ್ಷಾ ಕೇಂದ್ರದ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.