ಪೇಡಾನಗರಿಯಲ್ಲೇ ಕಳ್ಳರ ಹಾವಳಿ ಹೆಚ್ಚಾಗಿದ್ದು. ಇಂತಹ ಚೋರರ ಬಂಧನ ಯಾವಗ್ ಪೊಲೀಸ್ ಸಾಹೇಬ್ರೇ?

ಪೇಡಾ ನಗರಿಯಲ್ಲಿ ಮತ್ತೇ ಕಳ್ಳರ ಹಾವಳಿ ಹೆಚ್ಚಾಗಿದ್ದು, ಧಾರವಾಡ ಜನತೆಯ ನಿದ್ದೇ ಗೆಡಿಸಿದೆ. ಕಳೆದ ಎರಡು ದಿನಗಳ ಹಿಂದೆ ಕಳ್ಳರ ಕೈಚಳಕದ ದೃಶ್ಯಗಳು ಮನೆ ಮುಂದೆ ಅಳವಡಿಸಿದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅವಳಿನಗರದ ಜನತೆಯಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ.ಹೌದು ಹೀಗೆ ನಗರದ ವಿವಿಧ ಬಡಾವಣೆಗಳಲ್ಲಿ ರಾತ್ರಿಯಿಡೀ ಸಂಚರಿಸಿ ಬೈಕ್ಗಳನ್ನ ಹುಡುಕುವ ಬೈಕ್ ಕಳ್ಳರ ಗ್ಯಾಂಗ್, ಯಾರೂ ಇಲ್ಲದ ಸಮಯದಲ್ಲಿ ಬೈಕ್ಗಳನ್ನು ಕದಿಯಲು ಪ್ಲ್ಯಾನ್ ಮಾಡಿ ಏಗರಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮದ್ಯರಾತ್ರಿ ಎರಡು ಮೂವತ್ತರ ಸುಮಾರಿಗೆ ನಗರದ ಮಾಳಾಪುರ ಹಾಗೂ ಸೈದಾಪುರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನ ಕಳ್ಳರ ತಮ್ಮ ಕೈಚಳಕ ತೋರಿಸಿ ರಾತ್ರೋರಾತ್ರಿ ಎಸ್ಕೆಪ್ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.ಇದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು ಮನೆ ಮುಂದೆ ವಾಹನ ನಿಲ್ಲಿಸಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಈ ಹಿಂದೆಯೂ ನಗರಗಳಲ್ಲಿ ಬೈಕ್ ಗಳನ್ನ ಕದ್ದು ಪರಾರಿಯಾಗಿರುವ ಪ್ರಕರಣ ನಡೆದಿತ್ತು. ಈಗ ಮತ್ತೆ ಹಲವು ಬೈಕ್ ಗಳು ಕಳ್ಳತನ ಆಗುತ್ತಿರುವುದರಿಂದ ಧಾರವಾಡ ಜನ ಆತಂಕದಲ್ಲಿದ್ದಾರೆ. ಹಾಗೂ ಈ ಭಾಗದಲ್ಲಿ ಪೊಲೀಸರ ಬೀಟ್ ಹೆಚ್ಚಿಸಿ ಸೂಕ್ತ ಭದ್ರತೆಯನ್ನು ನೀಡುವಂತೆ ಪೊಲೀಸ್ ಆಯುಕ್ತರಿಗೆ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.ಇನ್ನಮುಂದೇ ಆದ್ರೇ ಪೊಲೀಸ್ ಅಧಿಕಾರಿಗಳು ಇಂತಹ ಕಳ್ಳತನ ಎರಗಿಸುತ್ತಿರು ಚೋರರನ್ನು ಬಂಧಿಸಿ, ಅವಳಿನಗರದ ಜನರ ನೆಮ್ಮದಿ ಭಂಗ, ಭಯ ಹೋಗಲಾಡಿಸುತ್ತಾರೆ ಎಂಬುವುದು ಕಾದೂ ನೋಡಬೇಕಿದೆ....