ಬೆಂಗಳೂರಿನ ತುರಹಳ್ಳಿಯಲ್ಲಿ ಒಂದಲ್ಲ ನಾಲ್ಕು ಚಿರತೆಗಳಿವೆ: ಜನರಲ್ಲಿ ಹೆಚ್ಚಿದ ಆತಂಕ

ಬೆಂಗಳೂರು: ನಗರದ ತುರಹಳ್ಳಿ ಅರಣ್ಯ ಪ್ರದೇಶದ ಬಳಿ ಚರಿತೆ ಪ್ರತ್ಯಕ್ಷಗೊಂಡಿದ್ದಲ್ಲದೆ, ಜಿಂಕೆಯನ್ನು ಬೇಟೆಯಾಡಿದ್ದನ್ನು ಕಂಡ ಜನರು ಚಿರತೆ ಸೆರೆಗೆ ಆಗ್ರಹಿಸುತ್ತಿದ್ದಾರೆ. ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ, ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ. ಈ ನಡುವೆ ಸ್ಥಳೀಯರು ಒಂದಲ್ಲ ನಾಲ್ಕು ಚಿರತೆಗಳಿವೆ ಎಂದು ಹೇಳಿದ್ದಾರೆ. ಹೀಗಾಗಿ ವಾಕಿಂಗ್, ಜಾಗಿಂಗ್ಗೆ ತುರಹಳ್ಳಿ ಅರಣ್ಯದ ಕಡೆಗೆ ಸುಳಿಯುತ್ತಿಲ್ಲ. ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿ ಚಿರತೆ ಸೆರೆಹಿಡಿದು ಭೀತಿಯಿಂದ ಮುಕ್ತಿಗೊಳಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.