ವಯೋವೃದ್ಧರ ಸೇವೆಗಾಗಿಯೇ ಧಾರವಾಡದಲ್ಲಿ ಸಜ್ಜಾಗುತ್ತಿದೆ ರೋಬೋಟ್

ಆಧುನಿಕತೆ ಬೆಳೆದಂತೆಲ್ಲ. ಹೊಸ ಹೊಸ ಆವಿಷ್ಕಾರಗಳು ಕೂಡ ನಡೆಯುತ್ತಿವೆ. ಇದು ವಿಜ್ಞಾನದ ಯುಗ. ಹೀಗಾಗಿ ಯಾವ ಕೆಲಸ ಮಾಡಿದರೂ ಅದಕ್ಕೆ ವಿಜ್ಞಾನ ಸ್ಪರ್ಶ ನೀಡುತ್ತಲೇ ಇದೆ. ಧಾರವಾಡದ ಹಿರಿಮೆಯಾಗಿರುವ ಐಐಐಟಿ (ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ) ಯು ಇಂತಹ ಆವಿಷ್ಕಾರಗಳತ್ತ ದಾಪುಗಾಲು ಇಡುತ್ತಿದೆ. ಹೌದು ಹೀಗೆ ಶೇಕ್ ಹ್ಯಾಂಡ್ ಕೊಟ್ಟು ತನ್ನ ಪರಿಚಯ ಮಾಡಿಕೊಳ್ಳುತ್ತಿರುವ ರೋಬೋಟ್. ಇಂಗ್ಲಿಷ್ನಲ್ಲೇ ಎಲ್ಲಾ ಮಾಹಿತಿ ನೀಡುತ್ತಿರುವ ಈ ರೋಬೋಟ್ನ್ನು ವಯೋವೃದ್ಧರ ಸೇವೆಗಾಗಿ ರೆಡಿ ಮಾಡುವ ಕನಸನ್ನು ಐಐಐಟಿಯಲ್ಲಿರುವ ಮುಖ್ಯ ಇಂಜಿನಿಯರ್ ಅಧಿಕಾರಿಗಳು ಇಚ್ಚೆಸಿದ್ದಾರೆ. ಈ ರೋಬೋಟ್ ಪ್ರಮುಖವಾಗಿ ವಯೋವೃದ್ಧರ ಸೇವೆಗೆ ರೆಡಿಮಾಡಿದ್ದಾರೆ. ಮನೆಯಲ್ಲಿ ರೋಗಿಗಳ ಆರಿಕೆಗೆ ಅಂದ್ರ ಕೊವಿಡ್ ಸಮಯದಲ್ಲಿ ವೈರಸ್ ಬಂದಿರುವ ವ್ಯಕ್ತಿ ಕಡೆ ಯಾರು ಹೋಗುದಿಲ್ಲ ಆದ್ರೆ ರೋಬೋಟ್ ಹಂತವರ ಸೇವೆ ಮಾಡುತ್ತೆ ಅಂತಾರೆ ಐಐಐಟಿ ಇಂಜಿನಿಯರ್. ಒಟ್ಟಿನಲ್ಲಿ ವಯೋವೃದ್ಧರ ಸೇವೆಗಾಗಿಯೇ ಧಾರವಾಡದಲ್ಲಿ ಸಜ್ಜಾಗುತ್ತಿದೆ ರೋಬೋಟ್ ಆವಿಷ್ಕಾರಗಳು.