ಧಾರವಾಡದಲ್ಲಿ ಸರಣಿ ಮನೆಗಳ್ಳತನ

ಧಾರವಾಡ ನಗರದಲ್ಲಿ ನಿನ್ನೆ ತಡರಾತ್ರಿ ದೊಡ್ಡಮಟ್ಟದಲ್ಲಿ ಸರಣಿ ಕಳ್ಳತನ ನಡೆದಿದೆ.
ಧಾರವಾಡ ಕೆಲಗೇರಿಯ ಆಂಜನೇಯ ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು, ಮೂರ್ನಾಲ್ಕು ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ.
ಆಂಜನೇಯ ನಗರದ 4ನೇ ಕ್ರಾಸ್‌ನಲ್ಲಿರುವ ಪ್ರಕಾಶ್ ದೊಡ್ಡಮನಿ ಎಂಬ ಸಿಆರ್‌ಪಿಎಫ್ ಪೊಲೀಸ್ ಮನೆಯಲ್ಲಿ ಮೊದಲು ಕಳ್ಳರು ಕಳ್ಳತನ ಎಸಗಿದ್ದಾರೆ. ಇವರ ಮನೆಯಲ್ಲಿದ್ದ ಒಂದೂವರೆ ಕೆಜೆ ಬೆಳ್ಳಿ, ಚಿನ್ನ ಸೇರಿದಂತೆ 60 ಸಾವಿರ ಹಣವನ್ನು ದೋಚಿಕೊಂಡು ಹೋಗಿದ್ದಾರೆ.
ಅದೇ ಕ್ರಾಸ್‌ನಲ್ಲಿರುವ ಶಿವನಾಗ ಆಲದಮರ ಎಂಬುವವರ ಮನೆಗೆ ಎಂಟ್ರಿ ಕೊಟ್ಟು ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ. ಮನೆಯಲ್ಲಿ ಏನೂ ಸಿಗದಿದ್ದರಿಂದ ಅಲ್ಲಿಂದ
8ನೇ ಕ್ರಾಸ್‌ನಲ್ಲಿ ಬೀಗ ಹಾಕಿದ್ದ ರುದ್ರಪ್ಪ ಹನಜಿ ಅವರ ಮನೆಗೆ ಎಂಟ್ರಿ ಕೊಟ್ಟು ಅಲ್ಮೆರಾ ಒಡೆದು ಮನೆಯಲ್ಲಿನ 10 ಸಾವಿರ ಕಳ್ಳತನ ಮಾಡಿದ್ದಾರೆ.
ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.