ಕೋವಿಡ್ ಲಸಿಕಾ ಜಾಗೃತಿಗಾಗಿ ಕ್ಲಾಸಿಕ್ ನಿಂದ ನಡಿಗೆ ಜಾಥಾ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಾಗೂ ಕೋವಿಡ್ ಲಸಿಕಾ ಜಾಗೃತಿ ಅಭಿಯಾನದ ಭಾಗವಾಗಿ ನವೆಂಬರ್ 1 ರಂದು 66 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕ್ಲಾಸಿಕ್ ಸಮೂಹ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಜಿಲ್ಲಾಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಹು - ಧಾ ಮಹಾನಗರ ಪಾಲಿಕೆ ಹಾಗೂ ರಂಗಾಯಣ ಧಾರವಾಡ ಇವರ ಸಹಯೋಗದಲ್ಲಿ 3 ಕಿಮೀ ನಡಿಗೆ ಜಾಥಾವನ್ನು ಬೆಳಗ್ಗೆ 7 ಗಂಟೆಯಿಂದ ಕೋವಿಡ್ ಲಸಿಕಾ ಜಾಗೃತಿಗಾಗಿ ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಾಸಿಕ್ ಸಮೂಹ ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಎಸ್ ಉಪ್ಪಾರ ಅವರು ಹೇಳಿದರು. ಧಾರವಾಡದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಜಾಥಾದಲ್ಲಿ ಕ್ಲಾಸಿಕ್ ಸಮೂಹ ಸಂಸ್ಥೆಗಳ ಉದ್ಯೋಗಿಗಳು , ಕ್ಲಾಸಿಕ್ ಕೆಎಎಸ್ ಸಿ ಐಎಎಸ್ ಸ್ಪಡಿ ಸರ್ಕಲ್ , ಸ್ಪರ್ಧಾ ಸ್ಫೂರ್ತಿ ಪಬ್ಲಿಷರ್ಸ್ & ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್ , ಕ್ಲಾಸಿಕ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ , ಕ್ಲಾಸಿಕ್ ಪಿಯು ಭಾಗವಹಿಸಲಿದ್ದಾರೆ.ಅಲ್ಲದೆ ಡಿಗ್ರಿ ಕಾಲೇಜು ಹಾಗೂ ಕ್ಲಾಸಿಕ್ ಮೀಡಿಯಾ ವಿಂಗ್ ಸಿಬ್ಬಂದಿಯೊಂದಿಗೆ ಆಸಕ್ತ ಸಾರ್ವಜನಿಕರೂ ಈ ಜಾಥಾವು ಶ್ರೀನಗರದ ಶಿವಾಲಯ ದೇವಸ್ಥಾನದಿಂದ ಸಪ್ತಾಪುರ ಭಾವಿ ಮಾರ್ಗವಾಗಿ ಕೆಸಿಡಿ ಸರ್ಕಲ್ ಮೂಲಕ ರಂಗಾಯಣಕ್ಕೆ ಕೊನೆಗೊಳ್ಳಲಿದೆ. ಕನಿಷ್ಠ ಒಂದನೇ ಡೋಸ್ ಲಸಿಕೆ ಹಾಕಿಸಿಕೊಂಡವರು ಪಾಲ್ಗೊಳ್ಳಬಹುದಾಗಿದೆ ಎಂದರು.....