ಸಾರಿಗೆ ಸಚಿವರ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸಲು ಸಜ್ಜಾದ ವಜಾಗೊಂಡ ಬಿಎಂಟಿಸಿ ನೌಕರ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾರಿಗೆ ಸಚಿವರ ವಿರುದ್ಧವೇ ಅಖಾಡಕ್ಕಿಳಿಯಲು ಕೆಲಸದಿಂದ ವಜಾಗೊಂಡ ಸಾರಿಗೆ ನೌಕರನೊಬ್ಬ ಸಜ್ಜಾಗಿದ್ದಾರೆ. ಸಚಿವ ಶ್ರೀರಾಮುಲು ವಿರುದ್ದ ಸಾರಿಗೆ ಇಲಾಖೆಯ ಮಾಜಿ ನೌಕರ ರಾಮು ಡಿ. ಸ್ಪರ್ಧಿಸಲಿದ್ದಾರೆ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ರಾಮು, ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಂಡು ಕೆಲಸದಿಂದ ವಜಾಗೊಂಡಿದ್ದರು. ಇದರಿಂದ ಬೇಸತ್ತ ರಾಮು ಇದೀಗ ಸಾರಿಗೆ ಸಚಿವರ ವಿರುದ್ದವೇ ಚುನಾವಣೆಗೆ ನಿಲ್ಲಲು ಸಜ್ಜಾಗಿದ್ದಾರೆ.