ಗುಪ್ತಾಂಗದಲ್ಲಿ ಎರಡು ಮೊಬೈಲ್: ಜೈಲಿನಲ್ಲಿ ಸಿಕ್ಕಿಬಿದ್ದ ಮಹಿಳೆ

ಗುಪ್ತಾಂಗದಲ್ಲಿ ಎರಡು ಮೊಬೈಲ್: ಜೈಲಿನಲ್ಲಿ ಸಿಕ್ಕಿಬಿದ್ದ ಮಹಿಳೆ

ಬೆಂಗಳೂರು: ಗುಪ್ತಾಂಗದಲ್ಲಿ ಎರಡು ಮೊಬೈಲ್ ಬಚ್ಚಿಟ್ಟುಕೊಂಡು ಕೈದಿಗೆ ನೀಡಲು ಬಂದಿದ್ದ ಸಂದರ್ಶಕಿ ಉಮ್ಮೆಶಾಮ (25) ಎಂಬುವವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ.

'ಕಾಡುಗೊಂಡನಹಳ್ಳಿ (ಕೆ.ಜಿ.

ಹಳ್ಳಿ) ನಿವಾಸಿಯಾದ 25 ವರ್ಷದ ಮಹಿಳೆ ಉಮ್ಮೆಶಾಮ, ಕೈದಿ ಮಹಮ್ಮದ್ ನದೇಮ್ ಅಲಿಯಾಸ್ ಬಡ್ಡೆಯನ್ನು ನೋಡಲು ಡಿ. 22ರಂದು ಸಂಜೆ ಜೈಲಿಗೆ ಬಂದಿದ್ದರು. ಮಹಿಳೆ ಮೇಲೆ ಅನುಮಾನಗೊಂಡು ತಪಾಸಣೆ ನಡೆಸಿದಾಗ ಗುಪ್ತಾಂಗದಲ್ಲಿ ಎರಡು ಬೇಸಿಕ್ ಮೊಬೈಲ್‌ಗಳು ಸಿಕ್ಕವು' ಎಂದು ಜೈಲಿನ ಮೂಲಗಳು ತಿಳಿಸಿವೆ.

'ಉಮ್ಮೆಶಾಮ ಅವರನ್ನು ವಶಕ್ಕೆ ಪಡೆದು ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದೆ. ಉಮ್ಮೆಶಾಮ ಹಾಗೂ ಕೈದಿ ಮಹಮ್ಮದ್ ನದೇಮ್ ಇಬ್ಬರ ವಿರುದ್ಧವೂ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ' ಎಂದೂ ಹೇಳಿವೆ.