ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಮುಖ್ಯ ಮಾಹಿತಿ: ನ. 6 ರಂದು ಟಿಇಟಿ ಪರೀಕ್ಷೆ ಫುಲ್ ಟೈಟ್
ಬೆಂಗಳೂರು: ನ. 6 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದೆ. ಸಂಪೂರ್ಣ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಭ್ಯರ್ಥಿಗಳು ಪರೀಕ್ಷೆ ಆರಂಭದ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು.
ಎಲ್ಲಾ ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸುವ ಕಾರಣ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಬೆಳಗಿನ ಪರೀಕ್ಷೆಗೆ 9 ಗಂಟೆಗೆ, ಮಧ್ಯಾಹ್ನದ ಪರೀಕ್ಷೆಗೆ 1.30 ನಿಮಿಷಕ್ಕೆ ಹಾಜರಿರಬೇಕು.
ಕೈಗಡಿಯಾರ, ಕ್ಯಾಲ್ಕುಲೇಟರ್, ಮೊಬೈಲ್, ಬ್ಲೂಟೂತ್ ಇತರೆ ಎಲೆಕ್ಟ್ರಾನಿಕ್ ಉಪಕರಣಗಳು, ಬೆಂಕಿ ಪೊಟ್ಟಣ, ಸಿಗರೇಟ್ ಲೈಟರ್ ಮೊದಲಾದ ವಸ್ತುಗಳನ್ನು ತರುವಂತಿಲ್ಲ.ಪರೀಕ್ಷೆ ಆರಂಭವಾದ ನಂತರ ಯಾರಿಗೂ ಒಳಗೆ ಪ್ರವೇಶ ಇರುವುದಿಲ್ಲ. ಪರೀಕ್ಷೆ ಮುಗಿಯುವವರೆಗೂ ಯಾರಿಗೂ ಹೊರಗೆ ಹೋಗಲು ಅವಕಾಶ ಇರುವುದಿಲ್ಲ.