ಈ ಸರ್ಕಾರಿ ಕ್ವಾರ್ಟರ್ಸನಲ್ಲಿ ಇರುವ ಸಿಬ್ಬಂದಿಗಳ ಗೋಳು ಕೇಳೋರಿಲ್ಲ
ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಾ, ಸದಾ ಜನರ ಮದ್ಯ ಇದ್ದು, ಹಾಸ್ಪಿಟಲ್ ಸ್ವಚ್ಚತೆ ಮಾಡುತ್ತಾ, ಜನರಿಗೆ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡ್ತಿರುವ ಸರ್ಕಾರಿ ಸಿಬ್ಬಂದಿಗಳಿಗೆ ವಾಸಿಸಲು ಸ್ವಚ್ಛತೆ ಇರುವ ಕೋಟರ್ಸ್ ನೀಡಿಲ್ಲ. ಹೌದು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಸಿಬ್ಬಂದಿ, ನಸ್೯ಗಳಿಗೆ, ಆಸ್ಪತ್ರೆಯ ಹಿಂದುಗಡೆ ಕ್ವಾರ್ಟರ್ಸ್ ನೀಡಿದ್ದಾರೆ. ಆದ್ರೆ ಕ್ವಾರ್ಟರ್ಸ್ ಸುತ್ತಲೂ ಆಸ್ಪತ್ರೆಯಲ್ಲೇ ಗಲೀಜು ತಂದು ಹಾಕಿ ಗಬ್ಬು ನಾರುವಂತೆ ಮಾಡಿದ್ದಾರೆ. ಈಗಷ್ಟೇ ತಾನೇ ಕೊವಿಡ್ ಮಹಾಮಾರಿಯಿಂದ ಚೇತರಿಕೆಗೊಂಡಿದ್ದ ಜನ, ನೆಮ್ಮದಿಯಲ್ಲಿ ಇದ್ದರೆ, ಮತ್ತೆ ಈ ಕ್ವಾರ್ಟರ್ಸ್ ನಲ್ಲಿ ಇರುವ ನಸ್೯, ಸಿಬ್ಬಂದಿಗಳ ಇರುವ ಮನೆಯ ನೋಡಿದ್ರೇ ಬರೀ ಹೊಲಸು,ಗಬ್ಬು ವಾಸನೆಯಿಂದ ಕೋಡಿದೆ.ಬರೀ ಕ್ವಾರ್ಟರ್ಸ್ ಸಮೀಪ ಹೋದ್ರೆ ವಾಸನೆ ತಡೆದುಕೊಳ್ಳದ ಪರಿಸ್ಥಿತಿ ಇದುರಾಗಿದೆ. ಗಬ್ಬು ನಾಥದ ಬಗ್ಗೆ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳ ಗಮನಕ್ಕೆ ತಂದ್ರು, ಯಾವುದೇ ಪ್ರಯೋಜ ಆಗ್ತಿಲ್ಲ. ಇದೇ ತರಾ ವಾಸನೆ ಇನ್ನು ಸ್ವಲ್ಪ ದಿನಗಳು ಮುಂದುವರಿದ್ರೇ ಅಲ್ಲೇ ಅಲ್ಲಿ ವಾಸಿಸುವ ಸಿಬ್ಬಂದಿಗಳು ರೋಗಗಳಿಗೆ ಗುರಿಯಾಗುವುದು ಗ್ಯಾರಂಟಿ....