ಎಲ್ಲ ಸಮಾಜಗಳು ಸುಂದರ ಬದುಕು ಕಟ್ಟಿಕೊಳ್ಳಬೇಕು,ಸಚಿವ ಶಂಕರ ಪಾಟೀಲಮುನೇನಕೊಪ್ಪ| Basavaraj Horatti | Shankar Patil
ಧಾರವಾಡ: ಪ್ರತಿಯೊಂದು ಸಮಾಜಗಳು ಸುಂದರ ಬದುಕನ್ನ ಕಟ್ಟಿಕೊಳ್ಳಬೇಕು. ಅದಕ್ಕಾಗಿ ಪ್ರತಿಯೊಬ್ಬರು ಉತ್ತಮ ವಿಚಾರಗಳನ್ನ ಮೈಗೂಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಸಚಿವ ಶಂಕರ ಪಾಟೀಲಮುನೇನಕೊಪ್ಪ ಕರೆ ನೀಡಿದರು. ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದ ಭ.1008 ಪಾರ್ಶ್ವನಾಥ ತೀರ್ಥಂಕರರ ನಿರ್ವಾಣ ಮಹೋತ್ಸವ (ಮುಕುಟ ಸ್ವಾಮಿ) ಕ್ರಾಂತಿಕಾರಿ ದಿಗಂಬರ ಜೈನ ಯುವಸಂತ ಧರ್ಮಪ್ರಭಾವಕ ಪ.ಪೂ 108 ಮುನಿಶ್ರೀ ಪ್ರಸಂಗ ಸಾಗರ ಮಹಾರಾಜರ 11ನೇ ಪುಷ್ಟವರ್ಷಾಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಸಹಬಾಳ್ವೆ ನಡೆಸಬೇಕಿದೆ. ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಾವೇ ಪುಣ್ಯವಂತರು ಎಂದು ಹೇಳಿದ್ರು. ಈ ಕಾರ್ಯಕ್ರಮದಲ್ಲಿ ಶಾಸಕ ಅಮೃತ ದೇಸಾಯಿ, ತವನಪ್ಪ ಅಷ್ಟಗಿ ಸೇರಿದಂತೆ ಇತರೆ ಗಣ್ಯರು ಭಾಗಿಯಾಗಿದ್ದರು.