ಆತ್ಮಹತ್ಯೆ ಪ್ರಕರಣ: 'ನಟಿ ತುನೀಶಾ ಶರ್ಮಾಗೆ ಇಸ್ಲಾಂ ಅನುಸರಿಸುವಂತೆ, ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿದ್ದ ಶೀಜಾನ್ ಖಾನ್'
ಸಂಬಂಧದಲ್ಲಿದ್ದಾಗ ಶೀಜನ್ ತುನೀಷಾಳನ್ನು ಸಂಪೂರ್ಣವಾಗಿ ಬದಲಾಯಿಸಿದ್ದ. ಇಸ್ಲಾಂ ಧರ್ಮವನ್ನು ಅನುಸರಿಸುವಂತೆ ಶೀಝನ್ ಪುತ್ರಿಯನ್ನು ಒತ್ತಾಯಿಸಿದ್ದ ಎಂದು ವನಿತಾ ಶರ್ಮಾ ಆರೋಪಿಸಿದ್ದಾರೆ. 20 ವರ್ಷದ ತುನಿಶಾ ಶರ್ಮಾ ಡಿಸೆಂಬರ್ 24 ರಂದು 'ಅಲಿ ಬಾಬಾ: ದಾಸ್ತಾನ್-ಎ-ಕಾಬೂಲ್' ಚಿತ್ರೀಕರಣದ ಸಮಯದಲ್ಲಿ ತಮ್ಮ ಮೇಕಪ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ನಟ ಹಾಗೂ ತುನಿಷಾ ಪ್ರಿಯಕರ ಶೀಜನ್ ಖಾನ್ ನನ್ನು ಬಂಧಿಸಲಾಗಿದೆ.
ವನಿತಾ ಶರ್ಮಾ ಹೇಳಿದ್ದೇನು? ಎಎನ್ಐಗೆ ನೀಡಿದ ಸಂದರ್ಶನದಲ್ಲಿ, ತುನಿಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ, "ಶೀಜನ್ಗೆ ಶಿಕ್ಷೆಯಾಗುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ಒಮ್ಮೆ ತುನೀಶಾ ಶೀಜನ್ನ ಫೋನ್ ಪರಿಶೀಲಿಸಿದಾಗ ಅವನು ತನಗೆ ಮೋಸ ಮಾಡುತ್ತಿದ್ದಾನೆ ಎಂದು ಕಂಡುಕೊಂದ್ದಳು. ಈ ಬಗ್ಗೆ ತುನೀಶಾ ಶೀಜನ್ನನ್ನು ಪ್ರಶ್ನಿಸಿದಾಗ, ಆತ ಅವಳಿಗೆ ಕಪಾಳಮೋಕ್ಷ ಮಾಡಿದ್ದಾನೆ.
ನನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲ. ಆಕೆ ಅನಾರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆತನ ಆರೋಪದಲ್ಲಿ ಹುರುಳಿಲ್ಲ.. ಆತನಿಂದಲೇ ನನ್ನ ಮಗಳು ಸಾವಿಗೀಡಾಗಿದ್ದಾಳೆ. ನಾನು ಶೀಜನ್ ನನ್ನು ಬಿಡುವುದಿಲ್ಲ, ನನ್ನ ಮಗಳು ಹೋದಳು, ನಾನು ಈಗ ಒಬ್ಬಂಟಿಯಾಗಿದ್ದೇನೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಶೀಜಾನ್ ಸೆಟ್ನಲ್ಲಿ ಡ್ರಗ್ಸ್ ಸೇವಿಸುತ್ತಾನೆ ಎಂದು ತುನಿಶಾ ಹೇಳಿದ್ದಳು. ಆತನ ಸ್ನೇಹದ ಬಳಿಕ ತುನೀಶಾಳ ನಡವಳಿಕೆ ಬದಲಾಗತೊಡಗಿತು. ಶೀಜಾನ್ ಇಸ್ಲಾಂ ಧರ್ಮವನ್ನು ಅನುಸರಿಸುವಂತೆ ಒತ್ತಾಯಿಸುತ್ತಿದ್ದ. ಅವಳು ಇಂದು ಬೆಳಿಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾಳೆ. ಆದರೆ ನಂತರ ಏನಾಯಿತು ಎಂದು ನಮಗೆ ತಿಳಿದಿಲ್ಲ ಎಂದೂ ಹೇಳಿದ್ದಾರೆ.