ಸೇನಾ ಸಮರಾಭ್ಯಾಸ: ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಉತ್ತರ ಕೊರಿಯಾ ವಾರ್ನಿಂಗ್!

ಸೇನಾ ಸಮರಾಭ್ಯಾಸ: ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಉತ್ತರ ಕೊರಿಯಾ ವಾರ್ನಿಂಗ್!

ತ್ತರ ಕೊರಿಯಾದ ಗಡಿಯಲ್ಲಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಅನುಚಿತವಾಗಿ ವರ್ತಿಸುತ್ತಿದ್ದು,

ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಸೇನಾ ಸಮರಾಭ್ಯಾಸ ಮುಂದುವರಿಸಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಈ ಎಚ್ಚರಿಕೆ ನೀಡಿದೆ.

ತಮ್ಮ ದೇಶದ ಶಸ್ತ್ರಾಸ್ತ್ರಗಳನ್ನು ಮತ್ತಷ್ಟು ಹೆಚ್ಚಿಸಲು ಕೊರಿಯಾವನ್ನು ಹೆಚ್ಚು ಕಷ್ಟಕರವಾದ ಯುದ್ಧ ವಲಯವನ್ನಾಗಿ ಮಾರ್ಪಾಡು ಮಾಡುತ್ತಿದ್ದಾರೆ.

ಅಮೆರಿಕ ಉತ್ತರ ಕೊರಿಯಾ ವಿರುದ್ಧವಾದ ನೀತಿಗಳನ್ನು ಅನುಸರಿಸುವವರೆಗೆ ಅವರೊಂದಿಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ. ಕೊರಿಯನ್ ಪರ್ಯಾಯ ದ್ವೀಪದಲ್ಲಿ ಮಿಲಿಟರಿ ಮತ್ತು ರಾಜಕೀಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದಕ್ಕೆ ಕಾರಣ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಘರ್ಷಣೆ ನಡೆಸಲು ಸಂಚು ರೂಪಿಸುತ್ತಿರುವುದು ಮತ್ತು ಪ್ರತಿಕೂಲ ಕಾರ್ಯಗಳಲ್ಲಿ ತೊಡಗಿದೆ ಎಂದು ಆರೋಪಿಸಿದೆ.

ಏತನ್ಮಧ್ಯೆ, ಉತ್ತರ ಕೊರಿಯಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಯುಎಸ್ ಗುಪ್ತಚರ ಸಂಸ್ಥೆ ಕೆಲವು ತಿಂಗಳ ಹಿಂದೆ ಹೇಳಿದಾಗ ಜಪಾನ್ ಮತ್ತು ದಕ್ಷಿಣ ಕೊರಿಯಾ ಕೂಡ ಜಾಗೃತವಾದವು. ಇತ್ತೀಚೆಗೆ ಉತ್ತರ ಕೊರಿಯಾ ಸತತ ಕ್ಷಿಪಣಿ ಪರೀಕ್ಷೆ ನಡೆಸಿ ಸಂಚಲನ ಮೂಡಿಸಿರುವ ಕಾರಣ ಉತ್ತರ ಕೊರಿಯಾದ ಕ್ರಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.