ಭಾರತೀಯ ಮೂಲದ ವಿಜ್ಞಾನಿ ಸುಮಿತಾ ಮಿತ್ರಾಗೆ 'ರೋಪಿಯನ್‌ ಇನ್ವೆಂಟರ್‌-2021' ಪ್ರಶಸ್ತಿ

ಭಾರತೀಯ ಮೂಲದ ವಿಜ್ಞಾನಿ ಸುಮಿತಾ ಮಿತ್ರಾಗೆ 'ರೋಪಿಯನ್‌ ಇನ್ವೆಂಟರ್‌-2021' ಪ್ರಶಸ್ತಿ

ನವದೆಹಲಿ: ಭಾರತೀಯ ಮೂಲದ ಅಮೆರಿಕನ್‌ ರಸಾಯನ ವಿಜ್ಞಾನಿ ಸುಮಿತಾ ಮಿತ್ರಾ ಅವರಿಗೆ ಪ್ರತಿಷ್ಠಿತ 'ಯುರೋಪಿಯನ್‌ ಇನ್ವೆಂಟರ್‌-2021' ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಹಲ್ಲುಗಳ ಚಿಕಿತ್ಸೆಗೆ ಅಗತ್ಯವಿರುವ ಪದಾರ್ಥಗಳನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲ ಬಾರಿಗೆ ನ್ಯಾನೊ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅನ್ವಯಿಸಿದ ಹೆಗ್ಗಳಿಕೆ ಮಿತ್ರಾ ಅವರದು. ದಂತಪಂಕ್ತಿ ಅಂದಗೆಡದಂತೆ ಹಾಗೂ ಸದೃಢಗೊಳಿಸಲು ನೀಡುವ ಚಿಕಿತ್ಸೆಗಾಗಿ ವಿಶ್ವದೆಲ್ಲೆಡೆ ಮಿತ್ರಾ ಅವರು ಅಭಿವೃದ್ಧಿ ಡಿಸಿರುವ ಪದಾರ್ಥಗಳನ್ನೇ ಬಳಸಲಾಗುತ್ತಿದೆ.

'ಯುರೋಪಿಯನ್‌ ಪೇಟೆಂಟ್‌ ಆಫೀಸ್‌' (ಇಪಿಒ) ವ್ಯಾಪ್ತಿಗೆ ಒಳಪಡದ ದೇಶಗಳ ವಿಭಾಗದಲ್ಲಿ ಮಿತ್ರಾ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಇಪಿಒ ಅಧ್ಯಕ್ಷ ಆಯಂಟೊನಿಯೊ ಕ್ಯಾಂಪಿನೋಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.