ಕೋವಿಡ್ ಹೆಚ್ಚಳ: ಆಸ್ಟ್ರಿಯಾದಲ್ಲಿ ನ.22ರಿಂದ ಲಾಕ್‌ಡೌನ್ ಘೋಷಣೆ

ಬರ್ಲಿನ್: ಆಸ್ಟ್ರಿಯಾದಲ್ಲಿ ಕೋವಿಡ್-19ನ ನಾಲ್ಕನೇ ಅಲೆ ಕಾಣಿಸಿಕೊಂಡಿದ್ದು, ಸೋಂಕು ಪ್ರಸರಣ ತಡೆಯುವ ಸಲುವಾಗಿ ಸೋಮವಾರದಿಂದ ಲಾಕ್‌ಡೌನ್ ಘೋಷಿಸಲಾಗಿದೆ.
'ಮೊದಲ ಹಂತವಾಗಿ ನ.22ರಿಂದ 10 ದಿನಗಳ ಕಾಲ ಲಾಕ್‌ಡೌನ್ ಜಾರಿಗೊಳಿಸಲಾಗುವುದು.
'ರೆಸ್ಟೊರೆಂಟ್‌ಗಳನ್ನು ಬಂದ್ ಮಾಡಲಾಗುವುದು, ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗುವುದು. ಶಾಲೆಗಳನ್ನು ಸಹ ಮುಚ್ಚಲಾಗುತ್ತಿದ್ದು, ಮಕ್ಕಳು ಮನೆಯಲ್ಲಿಯೇ ಕಲಿಕೆ ಮುಂದುವರಿಸಬೇಕು' ಎಂದು ಅವರು ಹೇಳಿದ್ದಾರೆ.