BIG BREAKING: ಕಾಬೂಲ್ ಏರ್ ಪೋರ್ಟ್ ನಿಂದ 150 ಭಾರತೀಯರ ಅಪಹರಣ

BIG BREAKING: ಕಾಬೂಲ್ ಏರ್ ಪೋರ್ಟ್ ನಿಂದ 150 ಭಾರತೀಯರ ಅಪಹರಣ

ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಜನರು ತತ್ತರಿಸಿ ಹೋಗಿದ್ದು, ಭಾರತೀಯರ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಆತಂಕಕಾರಿಯಾಗಿದೆ. ಈ ನಡುವೆ 150 ಭಾರತೀಯರು ಕಿಡ್ನ್ಯಾಪ್ ಆಗಿರುವ ಶಂಕೆ ವ್ಯಕ್ತವಾಗಿದೆ.

ತಾಯ್ನಾಡಿಗೆ ಮರಳಲಾಗದೇ ಹಲವು ಭಾರತೀಯರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಏರ್ ಪೋರ್ಟ್ ನಿಂದ 150 ಭಾರತೀಯರನ್ನು ಅಪಹರಿಸಲಾಗಿದೆ ಎಂದು ಭಾರತೀಯ ದೂತಾವಾಸ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ರಾಯಭಾರ ಕಚೇರಿಯ ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ದೊರೆತಿದ್ದು, ಅಪ್ಘಾನಿಸ್ತಾನದ ಶಿರಜಾದ್ ಎಂಬಾತನಿಂದ ಮಾಡಿರುವ ಟ್ವೀಟ್ ಲಭ್ಯವಾಗಿದೆ. ಅಪ್ಘಾನ್ ಸ್ಥಳೀಯ ಮಾಧ್ಯಮಗಳಲ್ಲಿಯೂ ಸುದ್ದಿ ಪ್ರಸಾರವಾಗುತ್ತಿದೆ. ಆದರೆ ಭಾರತದ ವಿದೇಶಾಂಗ ಇಲಾಖೆ ಈ ಬಗ್ಗೆ ಯಾವುದೇ ಮಾಹಿತಿ ಖಚಿತಪಡಿಸಿಲ್ಲ.