ಅಫ್ಘಾನ್: ಭಾರತದಿಂದ ಸಕ್ಕರೆ ರಫ್ತು ಸಂಪೂರ್ಣ ಸ್ಥಗಿತ

ಅಫ್ಘಾನ್: ಭಾರತದಿಂದ ಸಕ್ಕರೆ ರಫ್ತು ಸಂಪೂರ್ಣ ಸ್ಥಗಿತ

ಅಫ್ಘಾನಿಸ್ಥಾನ : ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಭಾರತದಿಂದ ಸಕ್ಕರೆ ರಫ್ತು ಸಂಪೂರ್ಣ ರದ್ದುಮಾಡಲಾಗಿದೆ.

ಭಾರತೀಯ ವರ್ತಕರು ತಾಲಿಬಾನ್ ಗೆ ಸಕ್ಕರೆ ರಫ್ತು ರದ್ದು ಮಾಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದಿಂದ ಸಕ್ಕರೆ ಆಮದು ಮಾಡಿಕೊಳ್ಳುವ ಟಾಪ್ 3 ರಾಷ್ಟ್ರಗಳಲ್ಲಿ ಅಫ್ಘಾನಿಸ್ಥಾನ ಕೂಡ ಒಂದು. ಪ್ರತಿ ವರ್ಷ ಅಫ್ಘಾನಿಸ್ಥಾನ 6 ಲಕ್ಷದಿಂದ 7ಲಕ್ಷ ಟನ್ ವರೆಗೆ ಸಕ್ಕರೆ ಆಮದು ಮಾಡಿಕೊಳ್ಳುತ್ತಿತ್ತು. 2020-2021 ವಾರ್ಷಿಕವಾಗಿ 6,50,000 ಟನ್ ಸಕ್ಕರೆ ಆಮದು ಮಾಡಿಕೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಆಹಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬೋಧ್ ಕುಮಾರ್, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ಬಳಿಕ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುತ್ತಿದೆ. ಹೊಸ ಆಡಳಿತ ಬಂದ ಬಳಿಕ ಮತ್ತೆ ಸಕ್ಕರೆ ರಫ್ತು ಪುನಾರಂಭಗೊಳ್ಳಲಿದೆ ಎಂದರು. ಬ್ರೆಜಿಲ್ ಬಳಿಕ ಭಾರತದಲ್ಲೇ ಅತಿ ಹೆಚ್ಚು ಸಕ್ಕರೆ ಉತ್ಪಾದನೆಯಾಗಲಿದೆ.