ಮಹೇಶ್ ಬಾಬು ತಂದೆ ಕೃಷ್ಣ ಘಟ್ಟಮನೇನಿ ನಿಧನ
ಹೈದರಾಬಾದ್: ನಟ ಮಹೇಶ್ ಬಾಬು ಅವರ ತಂದೆ, ಸೂಪರ್ ಸ್ಟಾರ್ ಕೃಷ್ಣ ಘಟ್ಟಮನೇನಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಸುಕಿನ 4 ಗಂಟೆಗೆ ನಿಧನರಾದರು.
ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೆಲುಗು ಚಿತ್ರರಂಗದಲ್ಲಿ ಕೃಷ್ಣ ಅವರು ಸೂಪರ್ ಸ್ಟಾರ್ ಆಗಿ ಮಿಂಚಿದವರು. 1965ರಲ್ಲಿ ಅವರು ನಟನೆಯ ಜರ್ನಿ ಆರಂಭಿಸಿದ್ದರು. ಪೌರಾಣಿಕ, ಐತಿಹಾಸಿಕ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಅಭಿಮಾನಿಗಳ ಮನ ಗೆದ್ದರು. ಕೃಷ್ಣ ಅವರ ಅಂದಾಜು 25 ಸಿನಿಮಾಗಳಲ್ಲಿ ಮಹೇಶ್ ಬಾಬು ಬಾಲ ನಟನಾಗಿ ಅಭಿನಯಿಸಿದ್ದರು.
ಸೆಪ್ಟೆಂಬರ್ 28ರಂದು ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನ ಹೊಂದಿದರು. ಆ ಬಳಿಕ ಕೃಷ್ಣ ಅವರು ಖಿನ್ನತೆಗೆ ಒಳಗಾದರು ಎನ್ನಲಾಗಿದೆ. ಈ ವರ್ಷ ಆರಂಭದಲ್ಲಿ ಕೃಷ್ಣ ಅವರ ಹಿರಿಯ ಪುತ್ರ ರಮೇಶ್ ಬಾಬು ಕೂಡ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು. ಒಟ್ಟಿನಲ್ಲಿ ಮಹೇಶ್ ಬಾಬು ಕುಟುಂಬಕ್ಕೆ 2022ರಲ್ಲಿ ಒಂದರಮೇಲೊಂದು ಕಷ್ಟ ಎದುರಾಗುತ್ತಿದೆ. ಕೃಷ್ಣ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಕೃಷ್ಣ ತೇನಿಮನಸಲು, ಸಾಕ್ಷಿ, ಅಲ್ಲೂರಿ ಸೀತಾರಾಮರಾಜು, ಸಿಂಹಾಸನಂ, ಪಾಡಿಪಂಟಲು, ಪಚ್ಚನಿಸಂಸಾರಂ, ಪಂಡಂಟಿಕಾಪುರಂ, ದೇವಡು ಚೇಸಿನ ಮನಷುಲು, ಅಗ್ನಿಪರ್ವತಂ, ಕಂಚುಕಾಗಡ, ನಂಬರ್ ಒನ್, ಬ್ರಹ್ಮಾಸ್ತ್ರಂ, ಮೋಸಗಾಳ್ಳಕು ಮೋಸಗಾಡು, ಮುಂದಡುಗು, ಕಂಚುಕಾಗಡ, ವಾರಸುಡು, ಒಸೆಯ್ ರಾಮುಲಮ್ಮ, ಪ್ರಜಾರಾಜ್ಯಂ, ಗೂಢಚಾರಿ 116, ಏಜೆಂಟ್ ಗೋಪಿ, ಅಶ್ವತ್ಥಾಮ, ಇದ್ದರು ದೊಂಗಲು, ಮುಗ್ಗುರು ಕೊಡುಕಲು, ಅನ್ನದಮ್ಮುಲ ಸವಾಲ್, ಕೈದಿ ರುದ್ರಯ್ಯ, ಈನಾಡು ಸೇರಿದಂತೆ 350ಕ್ಕೂ ಅಧಿಕ ಸಿನಿಮಾಗಳಲ್ಲಿ ಕೃಷ್ಣ ಅವರು ಬಣ್ಣ ಹಚ್ಚಿದ್ದರು.
It is with deep sadness and heavy hearts we inform you that #SuperStarKrishna garu has passed away
Unbearable Loss to the family & Fans
Om Shanti
Related Posts
Cricket Score
CORONA UPDATES
Popular Posts
Recommended Posts
-
ಅತ್ಯಾಚಾರ ಪ್ರಕರಣ ಖಂಡಿಸಿ, ಜಯ ಕರ್ನಾಟಕ ಪ್ರತಿಭಟನೆ.
Oct 1, 2021
-
ಶಾಸಕರೇ ನಿಮ್ಮ ಹೆಸರಲ್ಲೂ ಆಕ್ರಮ ಲೇಜೌಟ್ ಇದೆಯಾ.
Sep 30, 2021
-
ಬದಲಾದ ಉದ್ಯೋಗ ಪರ್ವ' ವಿಚಾರ ಸಂಕಿರಣಕ್ಕೆ ಚಾಲನೆ
Sep 30, 2021
-
ಮಲೆನಾಡು ಮಿತ್ರವೃಂದದಿಂದ ಮೂವರು ಗಣ್ಯರಿಗೆ ನುಡಿ ನಮನ
Sep 30, 2021