ಮಾ.1 ರಿಂದ ರಾಜ್ಯದಲ್ಲಿ ಬಿಜೆಪಿ 'ವಿಜಯ ಸಂಕಲ್ಪ ಯಾತ್ರೆ' ಆರಂಭ

ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಮಾ.1ರಿಂದ ಬಿಜೆಪಿಯ 'ವಿಜಯ ಸಂಕಲ್ಪ ಯಾತ್ರೆ' ಆರಂಭವಾಗಲಿದೆ.
ಮಾ 1 ರಂದು ಬೆಳಗ್ಗೆ 11 ಗಂಟೆಗೆ ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟದಲ್ಲಿ ಯಾತ್ರೆಗೆ ಚಾಲನೆ ದೊರೆಯಲಿದೆ.
ರಾಜ್ಯದ ನಾಲ್ಕು ದಿಕ್ಕುಗಳಿ೦ದ ಆರಂಭವಾಗಲಿರುವಬಿಜೆಪಿಯ 'ವಿಜಯ ಸಂಕಲ್ಪ ಯಾತ್ರೆ' ಗೆ ಬಿಜೆಪಿ ಈಗಾಗಲೇ ಸಿದ್ದತೆ ನಡೆಸಿದೆ.ನಾಲ್ಕು ಯಾತ್ರೆಗಳಿ ಗಾಗಿ ನಾಲ್ಕು ಪ್ರತ್ಯೇಕ ಹವಾನಿಯಂತ್ರಿತ ಬಸ್ಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಬಿಜೆಪಿಯು ಅಶೋಕ್ ಲೈಲ್ಯಾಂಡ್ ಕಂಪನಿಗೆ ಸೇರಿದ 4 ಲಘು ವಾಣಿಜ್ಯ ವಾಹನವನ್ನು ಖರೀದಿಸಿದೆ. ಈ ನಾಲ್ಕು ವಾಹನಗಳು 20 ದಿನಗಳಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸರಿ ಸುಮಾರು 8000 ಕಿ.ಮೀ. ನಷ್ಟು ಕ್ರಮಿಸಲಿವೆ.