ಪರೇಶ್ ಮಸ್ತಾ ಸಾವು ಖಂಡಿಸಿ ಪ್ರತಿಭಟನೆ ಪ್ರಕರಣ: ಸ್ಪೀಕರ್ ಕಾಗೇರಿ ಸೇರಿ 122 ಜನರ ಮೇಲಿದ್ದ ಕೇಸ್ ಹಿಂಪಡೆಯಲು ಸರ್ಕಾರ ನಿರ್ಧಾರ

ಪರೇಶ್ ಮಸ್ತಾ ಸಾವು ಖಂಡಿಸಿ ಪ್ರತಿಭಟನೆ ಪ್ರಕರಣ: ಸ್ಪೀಕರ್ ಕಾಗೇರಿ ಸೇರಿ 122 ಜನರ ಮೇಲಿದ್ದ ಕೇಸ್ ಹಿಂಪಡೆಯಲು ಸರ್ಕಾರ ನಿರ್ಧಾರ

ಬೆಂಗಳೂರು: ಹಿಂದೂ ಕಾರ್ಯಕರ್ತ ಪರೇಶ್ ಮೆಸ್ತಾ ಸಾವಿನನ್ನು ಖಂಡಿಸಿ ಪ್ರತಿಭಟನೆ ನಡೆಸಿದಂತ ವೇಳೆಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ 122 ಮಂದಿ ವಿರುದ್ಧ ದಾಖಲಾಗಿದ್ದಂತ 3 ಪ್ರಕರಣಗಳನ್ನು ವಾಪಾಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಪರೇಶ್ ಮೆಸ್ತಾ ಸಾವಿನ ಪ್ರಕರಣ ಖಂಡಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದ ಕಾರಣ 122 ಮಂದಿ ವಿರುದ್ಧ 3 ಕೇಸ್ ದಾಖಲಾಗಿದ್ದನ್ನು ವಾಪಾಸ್ ಪಡೆಯಲು ನಿರ್ಧರಿಸಲಾಗಿದೆ.

ಅಂದಹಾಗೇ 2017ರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪರೇಶ್ ಮೇಸ್ತಾ ಸಾವನ್ನಪ್ಪಿದ್ದನು. ಆತನ ಸಾವು ಖಂಡಿಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಶಾಸಕ ವಿಶ್ವೇಶ್ವರ ಹೆಗೆಡೆ ಕಾಗೇರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ಹಿಂಸಾಸ್ವರೂಪವನ್ನು ಪಡೆದುಕೊಂಡಿತ್ತು. ಹೀಗಾಗಿ ಶಾಸಕ ಕಾಗೇರಿ ಸೇರಿದಂತೆ 122 ಮಂದಿಯ ವಿರುದ್ಧ 3 ಕೇಸ್ ದಾಖಲಾಗಿತ್ತು. ಈ ಕೇಸ್ ಗಳನ್ನು ಈಗ ಸರ್ಕಾರ ವಾಪಾಸ್ ಪಡೆಯುವಂತ ತೀರ್ಮಾನ ಕೈಗೊಂಡಿದೆ.

ಈ ಹಿಂದೆ ರಾಜ್ಯ ಸರ್ಕಾರ 16 ಕೇಸ್ ಗಳನ್ನು ಹಿಂಪಡೆದಿತ್ತು. ಈಗ ಮತ್ತೆ ಮೂರು ಕೇಸ್ ಗಳನ್ನು ವಾಪಾಸ್ ಪಡೆಯೋ ನಿರ್ಧಾರವನ್ನು ಕೈಗೊಂಡಿದೆ.