'ಕೊರೊನಾ' ಕಷ್ಟಕಾಲದಲ್ಲಿ ಏನೂ ಕೊಡಲಿಲ್ಲ : ನಿರಾಣಿ ಹಂಚಿದ 'ಸಕ್ಕರೆ' ತಿರಸ್ಕರಿಸಿದ ಲೇಡಿ

'ಕೊರೊನಾ' ಕಷ್ಟಕಾಲದಲ್ಲಿ ಏನೂ ಕೊಡಲಿಲ್ಲ : ನಿರಾಣಿ ಹಂಚಿದ 'ಸಕ್ಕರೆ' ತಿರಸ್ಕರಿಸಿದ ಲೇಡಿ

ಬಾಗಲಕೋಟೆ: ವಿಧಾನಸಭೆ ಚುನಾವಣೆ ಹಿನ್ನೆಲೆ ವಿವಿಧ ರಾಜಕೀಯ ಪಕ್ಷಗಳು ಮತದಾರರಿಗೆ ಹಲವು ಆಮಿಷ ಒಡ್ಡುತ್ತಿದೆ. ಇದೀಗ ಸಚಿವ ಮುರುಗೇಶ್ ನಿರಾಣಿ ಕೊಟ್ಟ ಸಕ್ಕರೆಯನ್ನು ಮಹಿಳೆ ತಿರಸ್ಕರಿಸಿದ್ದಾರೆ.

ಬೀಳಗಿ ಕ್ಷೇತ್ರ ಗಲಗಲಿ ಗ್ರಾಮದ ಮಹಿಳೆ ಅನ್ನಪೂರ್ಣ ಬಗಲಿ ಎಂಬುವವರು ಮುರುಗೇಶ್ ನಿರಾಣಿ ಕೊಟ್ಟ ಸಕ್ಕರೆ ಚೀಲವನ್ನು ತಿರಸ್ಕರಿಸಿದ್ದಾರೆ.

ಸಚಿವ ನಿರಾಣಿ ಬೆಂಬಲಿಗರು ಮನೆ ಮನೆಗೂ ಸಕ್ಕರೆ ಹಂಚುತ್ತಿದ್ದರು. ಅಂತೆಯೇ ಗಲಿಗಲಿಯ ಮನೆಯೊಂದಕ್ಕೆ ಸಕ್ಕರೆ ಚೀಲ ಹಂಚಲು ಹೋಗಿದ್ದಾರೆ. ಆದರೆ ಮಹಿಳೆ ಕೊರೊನಾದ ಕಷ್ಟ ಕಾಲದಲ್ಲಿ ಯಾರೂ ಬರಲಿಲ್ಲ, ಈಗ ಬಂದಿದ್ದೀರಾ..ನಮಗೆ ಏನು ಬೇಡ ಎಂದು ಸಕ್ಕರೆ ಚೀಲವನ್ನು ತಿರಸ್ಕರಿಸಿದ್ದಾರೆ. ಕೊನೆಗೆ ಬೆಂಬಲಿಗರು ಒತ್ತಾಯವಾಗಿ ಸಕ್ಕರೆ ಚೀಲ ಮನೆಯೊಳಗೆ ಹೋಗಿ ನೀಡಿದ್ದಾರೆ. ಆದರೆ ಮಹಿಳೆ ಅದನ್ನು ವಾಪಸ್ ಹೊರಗೆ ಇಟ್ಟಿದ್ದಾರೆ. ಸದ್ಯ. ದೃಶ್ಯಾವಳಿಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.